ದೇವಾಲಯ ನೌಕರರಿಗೆ ಸರ್ಕಾರದ ಆದೇಶದಂತೆ ಸಂಬಳಕ್ಕೆ ನಕಾರ

ನ್ಯಾಯಾಲಯದ ತೀರ್ಪಿನಿಂದ ನಿಟ್ಟುಸಿರುಬಿಟ್ಟ ಸಿಬ್ಬಂದಿ

1/7/2025

ಉಡುಪಿ ತಾಲ್ಲೂಕಿನ ಶ್ರೀ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ದೇವಾಲಯದಲ್ಲಿ ದೇವಾಲಯ ನೌಕರನಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದು ಈ ಸಿಬ್ಬಂದಿಗೆ ಪೂರ್ಣ ವೇತನ ನೀಡದೆ ತೊಂದರೆ ಕೊಡುತ್ತಿದ್ದು ಸರಿಯಷ್ಟೇ. ಈ ವಿಚಾರದಲ್ಲಿ ಶ್ರೀ ನಟರಾಜ್ ಪೂರ್ಣೀಕ್ ಎಂಬವರು

ಹಲವು ಬಾರಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಮುಜರಾಯಿ ಆಯುಕ್ತರುಗಳಿಗೆ ಮತ್ತು ದೇವಾಲಯದ ಸಮಿತಿಯ ಮುಖ್ಯ ಟ್ರಸ್ಟಿಗಳಾದ ಶ್ರೀ ವಿಜಯ್‌ಬಳ್ಳಾಲ್‌ರವರಿಗೂ ಹಲವು ಭಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಆಗಾಗಿ ಕೊನೆಯಲ್ಲಿ ಶ್ರೀ ನಟರಾಜ್‌ಪೂರ್ಣಿಕ್‌ರವರು ೨೦೨೦ರಲ್ಲಿ ನ್ಯಾಯಾಲಯ ಮೊರೆ ಹೋಗಿ ವ್ಯಾಜ್ಯ ದಾಖಲಿಸಿದ್ದುಅದರಂತೆ ನ್ಯಾಯಾಲಯವು ಪರಿಹಾರವಾಗಿ ೩ ಲಕ್ಷ ೨೪ ಸಾವಿರ ನೀಡುವಂತೆ ಆದೇಶಿಸಿದ್ದು ಆ ಹಣವನ್ನು ಮುಜರಾಯಿ ದೇವಾಲಯದ ಅನುವಂಶಿಕ ಆಡಳೀತ ಮುಖ್ಯಸ್ಥರು ಹಣವನ್ನು ನೀಡಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಲಕ್ಷಾಂತರ ರೂಪಾಯಿ ವರಮಾನ ಬರುವ ಈ ದೇವಸ್ಥಾನದಲ್ಲಿ ಸರಕಾರದಾದರು ಕೇವಲ ೪-೫ ಸಾವಿರ ಮಾತ್ರ ಸಂಬಳ ನೀಡುತ್ತಿದ್ದರು. ಕಳೆದ ೫ ನವೆಂಬರ್ ೨೦೨೪ರಂದು ಅವರ ಪರವಾಗಿ ಆದೇಶವಾಗಿರುತ್ತದೆ. ಒಟ್ಟು ೧೩ಲಕ್ಷ ಹಣವನ್ನು ಆ ಸಿಬ್ಬಂದಿಗೆ ವ್ಯಾಜ್ಯ ಇತ್ಯರ್ಥವಾದ ಬಳಿಕ ನ್ಯಾಯಾಧೀಶರು ನೀಡಿರುತ್ತಾರೆ. ಈ ಒಂದು ವ್ಯಾಜ್ಯದಿಂದ ರಾಜ್ಯದಲ್ಲಿರುವ ಹಲವಾರು ದೇವಾಲಯ ನೌಕರರಿಗೆ ಅನುಕೂಲ ಆಗುವಂತೆ ಆಗಿರುತ್ತದೆ. ಆದೇಶದ ಪ್ರತಿಯನ್ನು ಈ ಲೇಖನದಲ್ಲಿ ಕಾಣಬಹುದು.