ಭಾರತಕ್ಕೆ ಡಬಲ್ ಧಮಾಕ ಮಹಿಳೆಯರು, ಪುರುಷರ ತಂಡಕ್ಕೆ ಖೋ ಖೋ ವಿಶ್ವಕಪ್ ಕಿರೀಟ

ಬಿ ಎನ್ ಎನ್

ಕ್ರೀಡಾ ಘಟನೆಗಳು

1/20/20251 ನಿಮಿಷ ಓದಿ

ಭಾರತದ ಮಹಿಳೆಯರ ತಂಡವು ಖೋ ಖೋ ವಿಶ್ವಕಪ್ನ ಫೈನಲ್‌ನಲ್ಲಿ ಅದ್ಭುತ ಗೆಲುವು ಸಾಧಿಸಿದೆ. ಅದರ ಬೆನ್ನಲ್ಲೇ ಪುರುಷರ ತಂಡವೂ ಸಾಂಘಿಕ ಆಟ ಪ್ರದರ್ಶಿಸಿ ದೇಸಿ ಕ್ರೀಡೆಯ ಚೊಚ್ಚಲ ವಿಶ್ವಕಿರೀಟ ಮುಡಿಗೇರಿಸಿಕೊಂಡಿದೆ.

ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ ತವರಿನ ಪ್ರೇಕ್ಷಕರ ಮುಂದೆ ಪ್ರಿಯಾಂಕಾ ಇಂಗೈ ಮತ್ತು ಪ್ರತೀಕ್ ವೈಕರ್ ಬಳಗವು ಗೆದ್ದು ಬೀಗಿತು.

ಎರಡೂ ವಿಭಾಗಗಳಲ್ಲೂ ನೇಪಾಳ ತಂಡವು ರನ್ನರ್‌ಅಪ್ ಪ್ರಶಸ್ತಿಗೆ ಪಾತ್ರವಾಯಿತು. ಆತಿಥೇಯ ತಂಡಗಳು ಜಯ ಸಾಧಿಸುತ್ತಿದ್ದಂತೆ ಕಿಕ್ಕಿರಿದು ಸೇರಿದ್ದ ಕ್ರೀಡಾಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ, ರಾಷ್ಟ್ರಧ್ವಜದೊಂದಿಗೆ ಕುಣಿದು ಕುಪ್ಪಳಿಸಿದರು.

19 ತಂಡಗಳಿದ್ದ ಮಹಿಳೆಯರ ವಿಭಾಗದಲ್ಲಿ ಭಾರತ ಮತ್ತು ನೇಪಾಳವು ಅಜೇಯವಾಗಿ ಫೈನಲ್ ಪ್ರವೇಶಿಸಿದ್ದವು. ಹೀಗಾಗಿ, ಅವುಗಳ ಸೆಣಸಾಟ ಭಾರೀ ಕುತೂಹಲ ಮೂಡಿಸಿತ್ತಾದರೂ, ಅಂತಿಮವಾಗಿ 28-40ರಿಂದ ಆತಿಥೇಯ ಬಳಗವು ಪಾರಮ್ಯ ಮೆರೆಯಿತು.