ಅಕ್ರಮ ನಿವೇಶನಗಳ ವಿರುದ್ಧ ಬಿಬಿಎಂಪಿಯ ಕ್ರಮ

ಬೃಹತ್ ನಾಡು ಮಾಧ್ಯಮ ವರದಿಗೆ ಗೆಲುವು!

ಬಿಎನ್ಎನ್ ಎಕ್ಸ್‌ಪೋಸ್ಹೋಮ್ ಪೇಜ್

1/11/20251 ನಿಮಿಷ ಓದಿ

ಬಿಎನ್ ಎನ್ ಡಿಜಿಟಲ್ ಮಾಧ್ಯಮದಲ್ಲಿ ಉಪನೋಂದಣಾಧಿಕಾರಿಗಳು ಭೂಮಾಫಿಯಾದವರೊಂದಿಗೆ ಶಾಮೀಲಾಗಿ ಅಕ್ರಮ ಲೇಔಟ್ ಗಳನ್ನು ನಿರ್ಮಿಸಲು ಸಹಕರಿಸುತ್ತಿದ್ದು; ಶೇ.40ರಷ್ಟು ಅಪಾರ್ಟ್ ಮೆಂಟ್ ಗಳಿಂದ ತೆರಿಗೆ ವಸೂಲಿ ಮಾಡದ ಬಿಬಿಎಂಪಿ ಆಡಳಿತ ವೈಫಲ್ಯದ ಕುರಿತು ಸವಿಸ್ತಾರವಾದ ವರದಿ ಮಾಡಿದ ಫಲವಾಗಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಪ್ರಕರಣ 17ಕ್ಕೆ ತಿದ್ದುಪಡಿಯಾಗಿದ್ದು ಅದರಂಎ ಏಕ ನಿವೇಶನವೂ ಸೇರಿದಂತೆ ಎಲ್ಲ ಸ್ವತ್ತುಗಳಿಗೂ ಯೋಜನಾ ಪ್ರಾಧಿಕಾರ ಅನುಮೋದನೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಇಂತಹ ಅನುಮೋದನೆ ಪಡೆಯದ ಸ್ವತ್ತುಗಳಿಗೆ ಬಿಬಿಎಂಪಿ, ಯಾವುದೇ ಎ-ಖಾತಾ ದಾಖಲಿಸಲು, ನೋಂದಾಯಿಸಲು ಅವಕಾಶವಿರುವುದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುತ್ತೋಲೆ ಹೊರಡಿಸಿದ್ದಾರೆ.

ಬಿಬಿಎಂಪಿ ಕಚೇರಿಗಳಲ್ಲಿ ಖಾತಾ ನೀಡಲು ಬಾಕಿ ಉಳಿಸಿಕೊಂಡಿರುವ ಅರ್ಜಿಗಳನ್ನು ವಿಲೇವಾರಿ ಮಾಡುವಂತಿಲ್ಲ. ಎಲ್ಲ ಅರ್ಜಿಗಳು ತಕ್ಷಣದಿಂದಲೇ ರದ್ದಾಗುತ್ತವೆ. ಉಲ್ಲಂಘನೆ ಮಾಡಿದ ಅಧಿಕಾರಿಗಳು, ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ಸಕ್ರಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಆಗದಿರುವ, ಎ ಅಥವಾ ಬಿ ಖಾತಾವನ್ನು ಹೊಂದಿರುವ ನಿವೇಶನಗಳಿಗೆ ವಿಭಜನೆ ಅಥವಾ ಉಪ ವಿಭಾಗವನ್ನು ಬಿಬಿಎಂಪಿ ಮಾಡುವುದಿಲ್ಲ. ಸಕ್ರಮ ಯೋಜನಾ ಪ್ರಾಧಿಕಾರದ ಅನುಮೋದನೆಯೊಂದಿಗೆ ಸ್ವಾಧೀನಾನುಭವ ಪತ್ರ ಪಡೆಯಲಾದ ಏಕ ಘಟಕ ಅಥವಾ ಬಹು ಘಟಕಗಳ ಕಟ್ಟಡದಲ್ಲಿನ ಪ್ರತಿ ಘಟಕವನ್ನು ಎ ವಹಿಯಲ್ಲಿ ದಾಖಲಿಸಿಕೊಂಡು ಎ ಖಾತಾ ನೀಡಲಾಗುತ್ತದೆ.

ಸಕ್ರಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ, ಎ ಅಥವಾ ಬಿ ಖಾತಾ ಹೊಂದಿರುವ ಸ್ವತ್ತುಗಳಲ್ಲಿ ನಿರ್ಮಿಸಿರುವ ಏಕ ಅಥವಾ ಬಹು ಘಟಕಗಳು, 2024ರ ಸೆಪ್ಟೆಂಬರ್ 30ರೊಳಗೆ ಬೆಸ್ಕಾಂ ಅಥವಾ ಜಲಮಂಡಳಿಯಿಂದ ಸಂಪರ್ಕ ಪಡೆದಿದ್ದರೆ ಅವುಗಳಿಗೆ ಬಿ ಖಾತಾ ನೀಡಲಾಗುತ್ತದೆ.

ಕೃಷಿ ಜಮೀನನ್ನು ಕೃಷಿಯಿಂದ ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಲಾಗಿದ್ದರೆ ಆ ಖಾಲಿ ಜಮೀನಿಗೆ ಬಿಬಿಎಂಪಿ ’ಎ’ ಅಥವಾ ’ಬಿ’ ವಹಿ/ ಖಾತಾವನ್ನು ಹೊಸದಾಗಿ ದಾಖಲಿಸುವುದಿಲ್ಲ ಎಂದು ಸುತ್ತೋಲೆಯಲ್ಲಿ ನಮೂದಿಸಲಾಗಿದೆ. ಈ ಮೂಲಕ ಬೃಹತ್ ನಾಡು ಡಿಜಿಟಲ್ ಮಾಧ್ಯಮದ ವರದಿಗೆ ಜಯ ಸಂದಂತಾಗಿದೆ.