BBMP ಗೆ ಸೇರಿದ ಕೋಟ್ಯಂತರ ಬೆಲೆಬಾಳುವ ಜಾಗ ಹರಾಜು..!

ಹೋಮ್ ಪೇಜ್ಬೆಂಗಳೂರು ನಗರ

1/22/20251 ನಿಮಿಷ ಓದಿ

ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಗಳ ಅನುಷ್ಟಾನಕ್ಕೆ ಹಣ ಸಂಗ್ರಹಿಸಲು ಇಲ್ಲ ಸಲ್ಲದ ಕಸರತ್ತು ನಡೆಸ್ತಿದೆ. ಒಂದು ಕಡೆ ಬೆಲೆ ಏರಿಕೆ ಮತ್ತೊಂದು ಕಡೆ ಪಾಲಿಕೆಯ ಗುತ್ತಿಗೆ ಅಸ್ತಿ ಹರಾಜು ಹಾಕಿ ಅದಾಯಗಳಿಸಲು ಪ್ಲಾನ್ ರೂಪಿಸಿದೆ..

ತನ್ನ ಗುತ್ತಿಗೆ ಅಸ್ತಿ ಬಿಕರಿ ಮಾಡಲು ಮುಂದಾದ ಬಿಬಿಎಂಪಿ..!

ಅದಾಯ ಕ್ರೋಡೀಕರಣಕ್ಕೆ ಪಾಲಿಕೆ ಅಸ್ತಿ ಮಾರಾಟ..!

ಬಿಬಿಎಂಪಿಗೆ ಸೇರಿದ ಕೋಟ್ಯಂತರ ಬೆಲೆಬಾಳುವ ಜಾಗ ಹರಾಜು..!

ಎಸ್ ..ಬಿಬಿಎಂಪಿ ತನ್ನ ಅದಾಯ ಹೆಚ್ಚಿಸಿಕೊಳ್ಳಲು ನಗರದಲ್ಲಿ ಬಿಬಿಎಂಪಿ ಕೊಟ್ಟಿರೋ ಗುತ್ತಿಗೆ ಹಾಗೂ ಲೀಸ್ ಆಸ್ತಿಗಳನ್ನು ಹರಾಜು ಮೂಲಕ ಮಾರಾಟ ಮಾಡಲು ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯ ಸುಮಾರು 6815 ಅಸ್ತಿಗಳನ್ನೂ ಬಿಕರಿ ಮಾಡಲು ಹೊರಟಿದೆ. ಇನ್ನೂ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದ ಕಟ್ಟಡಗಳು ಒಳಗೊಂಡಂತೆ ಖಾಲಿ ನಿವೇಶನ ಹಾಗೂ ಕೆಲ ಲೀಸ್ ಕಟ್ಟಡಗಳಿಂದ ಪಾಲಿಕೆಗೆ ವಾರ್ಷಿಕ ಅದಾಯ ಕೇವಲ ಲಕ್ಷಗಳಲ್ಲಿ ಇದ್ದು. ಇದನ್ನು ಲೀಸ್ ಹಾಗೂ ಗುತ್ತಿಗೆ ಪಡೆದಿರೋ ಗುತ್ತಿಗೆದಾರರು ವಾರ್ಷಿಕ ವಾಗಿ ಕೋಟ್ಯಂತರ ಹಣ ಬಾಡಿಗೆ ಪಡೆಯುತ್ತಿದರೆ , ಇನ್ನೂ ಗುತ್ತಿಗೆ ಕೊಟ್ಟಿರೋ ಅಸ್ತಿಗಳು ನಗರದಲ್ಲಿ ಸುಮಾರು 50 ಎಕರೆಯಷ್ಟು ಇದ್ದು. ಇದರಿಂದ ಪಾಲಿಕೆಗೆ ಅದಾಯ ಬರ್ತಿಲ್ಲ. ಇವುಗಳನ್ನು ಮಾರಾಟ ಮಾಡುದ್ರೆ ಸರಿಸುಮಾರು 10 ಸಾವಿರ ಕೋಟಿಯಷ್ಟು ಪಾಲಿಕೆಗೆ ಅದಾಯ ಬರುತ್ತೆ. ಈಗಾಗಲೇ ಕರಡು ಪ್ರತಿ ಪ್ರಕಟನೆ ಮಾಡಲಾಗಿದೆ. 30 ದಿನಗಳ ವರೆಗೆ ಸಾರ್ವಜನಿಕರು ಅಕ್ಷೇಪಣೆ ಸಲ್ಲಿಸಬಹುದು ಅಂತ ತಿಳಿಸಿದ್ರು..

ಇನ್ನೂ .. ಬಿಬಿಎಂಪಿ ಖಾಸಗಿ ಸಂಸ್ಥೆಗಳಿಗೆ ಶಾಲೆಗಳಿಗೆ ಎಕರೆಗಟ್ಟಲೆ ಭೂಮಿಯನ್ನು ವಾರ್ಷಿಕ 50 ರೂ. 100 ರೂ ಗೆ ಬಾಡಿಗೆಗೆ ನೀಡಿರೋ ಉದಾಹರಣೆಗಳು ಇದ್ದು ಬಿಬಿಎಂಪಿ ಭೋಗ್ಯಕ್ಕೆ ಹಾಗೂ ಗುತ್ತಿಗೆ ನೀಡಿರೋ ಅಸ್ತಿಗಳ ಒಟ್ಟು 180 ಎಕರೆಗಳಷ್ಟಿವೆ. ಇನ್ನೂ ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿ ಭಾಗವಹಿಸುವಂತ್ತಿಲ್ಲ..

ಕೇವಲ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇಲಾಖೆಗಳು ನಿಗಮ ಮಂಡಳಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹರಾಜಿನಲ್ಲಿ ಭಾಗವಹಿಸಬಹುದು. ಚಾಲ್ತಿಯಲ್ಲಿರುವ ಮಾರ್ಗಸೂಚಿ ಪ್ರಕಾರ ಮಾರಾಟಕ್ಕೆ ಬಿಬಿಎಂಪಿ ಮುಂದಾಗಿದೆ. ಇನ್ನೂ ಈ ಬಗ್ಗೆ ಸಾರ್ವಜನಿಕರಿಂದ ಬಾರಿ ವಿರೋಧ ವ್ಯಕ್ತವಾಗಿದ್ದು. ಪಾಲಿಕೆ ತನ್ನ ಅಸ್ತಿಯನ್ನೇ ಉಳಿದೊಕೊಳ್ಳದ ಅಧಿಕಾರಿಗಳು ಈಗ ಸ್ವಂತ ಆಸ್ತಿಗಳನ್ನು ಮಾರಾಟ ಮಾಡಲು ಹೊರಾಟಿರೋದು ಪಾಲಿಕೆ ಖಜಾನೆ ಖಾಲಿ ಅಗಿದ್ಯಾ ಅನ್ನೋ ಅನುಮಾನ ಶುರುವಾಗಿದೆ ಅಂತ ತಿಳಿಸಿದ್ರು..

ಒಟ್ನಲ್ಲಿ.. ಅದಾಯ ಕ್ರೋಢೀಕರಣ ಕ್ಕೆ ರಾಜ್ಯ ಸರ್ಕಾರ ಪಾಲಿಕೆಯ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿರೋದು ನಿಜಕ್ಕೂ ಶೋಚನೀಯ ಸ್ಥಿತಿಗೆ ತಲುಪಿದೆ ಅಂದ್ರು ತಪ್ಪಾಗಲಾರದು..