ಮಂಗಳೂರಿನ ಕಮಿಷನರೇಟ್ ವ್ಯಾಪ್ತಿಯಲ್ಲಿ ಬೈರಾಸ್, ಇಸ್ಪೀಟ್ ದಂಧೆ ಅವ್ಯಾಹತವಾಗಿದೆ

ಹೋಮ್ ಪೇಜ್ದಕ್ಷಿಣ ಕನ್ನಡ

1/28/20251 ನಿಮಿಷ ಓದಿ

ಮಂಗಳೂರಿನ ಕಮಿಷನರೇಟ್ ವ್ಯಾಪ್ತಿಯಲ್ಲಿ ಬೈರಾಸ್, ಇಸ್ಪೀಟ್ ದಂಧೆ ಅವ್ಯಾಹತವಾಗಿದೆ. ಎಷ್ಟೇ ಎಚ್ಚರಿಸಿದರು ಕ್ರಮ ಕೈಗೊಳ್ಳುವ ಲಕ್ಷಣಗಳಂತೂ ಕಾಣುತ್ತಿಲ್ಲ. ಇನ್ನು ಮಂಗಳೂರಿನಲ್ಲಿ ಲೈಸೆನ್ಸ್ ಹೊಂದಿರುವ ರೀ ಕ್ರಿಯೇಷನ್ಸ್ ಕ್ಲಬ್ ಗಳು ಈ ಹಿಂದೆ ಸಾಕಷ್ಟು ಕಾರ್ಯಾಚರಿಸುತ್ತಿದ್ದವು. ಹಲವರು ಇಲ್ಲಿ ಹೋಗಿ ತಮ್ಮ ಬಿಡುವಿನ ಸಮಯವನ್ನು ಕಳೆಯುತ್ತಿದ್ದರು. ಇದೀಗ ಲೆಸೆನ್ಸ್ ಇದ್ದರೂ ಎಲ್ಲೂ ಬಂದ್ ಆಗಿವೆ. ಇವುಗಳಿಗೆ ಕಮಿಷನರ್ ಸಾಹೇಬರು ಪರ್ಮಿಷನ್ ಕೊಡಲು ಮೀನಾಮೇಷ ಎಣಿಸುತ್ತಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಒಂದೆಡೆ ಲೈಸೆನ್ಸ್ ಹೊಂದಿರುವ ರೀ ಕ್ರಿಯೇಷನ್ಸ್ ಕ್ಲಬ್ ಗಳಿಗೆ ಅನುಮತಿ ನೀಡದಿರುವುದು ಮಂಗಳೂರಿನಲ್ಲಿ ನಿತಿನ್ ಕೊಠ್ಠಾರಿ, ಪಮ್ಮಿ ಕೊಡಿಯಾಲ್ ಬೈಲ್, ಅನ್ವರ್ ರಂತಹ ಬೈರಾಸ್ ದಂಧೆಕೋರರಿಗೆ ಅಕ್ರಮ ದಂಧೆ ನಡೆಸಲು ದಾರಿ ಮಾಡಿಕೊಟ್ಟಂತಾಗಿದೆ. ಇದರಿಂದ ಇಸ್ಪೀಟ್ ಅಡ್ಡೆಗಳು ನಾಯಿಕೊಡೆಗಳಂತೆ ತಲೆಎತ್ತಿವೆ. ನೂರಾರು ಕುಟುಂಬಗಳೂ ಬೀದಿ ಪಾಲಾಗುತ್ತಿವೆ.

ಇತ್ತೀಚೆಗೆ ಮಂಗಳೂರಿನ ಹಂಪನಕಟ್ಟೆಯಲ್ಲಿ ಕದಳಿ ರೀ ಕ್ರಿಯೇಷನ್ ಕ್ಲಬ್ ಗೆ ಅನುಮತಿ ನೀಡಲಾಗಿದೆ. ಅಲ್ಲಿ ಹೆಚ್ಚಿನ ಮೊತ್ತದ ಹಣವನ್ನು ಪಣಕ್ಕಿಡಲಾಗುತ್ತದೆ. ಮುಂಬೈ ಮೂಲದ ವ್ಯಕ್ತಿಯೊಬ್ಬ ಇದರ ಮಾಲೀಕ. ಈತನಿಗೆ ಅನುಮತಿ ನೀಡಬಹುದು ಎಂದಾದರೆ ನ್ಯಾಯಾಲಯದ ಅನುಮತಿಯಿದ್ದರೂ ಅನೇಕ ರೀ ಕ್ರಿಯೇಷನ್ಸ್ ಕ್ಲಬ್ ಗಳಿಗೆ ಅನುಮತಿ ನಿರಾಕರಿಸುತ್ತಿರುವುದಾದರೂ ಏಕೆ? ಕದಳಿ ರೀ ಕ್ರಿಯೇಷನ್ ಕ್ಲಬ್ ಇರುವ ಅರ್ಹತೆ; ಬೇರೆ ಕ್ಲಬ್ ಗಳಲ್ಲಿ ಇಲ್ಲದಿರುವುದೇನು? ಅಧಿಕೃತ ಕ್ಲಬ್ ಗಳಿಗೆ ಅನುಮತಿ ನೀಡದೆ ಅಕ್ರಮ ದಂಧೆಕೋರರನ್ನು ಪ್ರೋತ್ಸಾಹಿಸುತ್ತಿರುವುದೇಕೆ? ಸಮ್ ಥಿಂಗ್ ಪ್ರಾಬ್ಲಮ್ಮಾ?

ಅಧಿಕೃತ ರೀ ಕ್ರಿಯೇಷನ್ಸ್ ಕ್ಲಬ್ ಗಳಿಗೆ ಅನುಮತಿ ನೀಡಿ; ಅಕ್ರಮಗಳಿಗೆ ಬ್ರೇಕ್ ಹಾಕಿ? ಇಲ್ಲವಾದರೆ ಮಂಗಳೂರು ದಂಧೆಕೋರರ ಹಾಟ್ ಸ್ಪಾಟ್ ಆಗುವುದರಲ್ಲಿ ಸಂದೇಹವಿಲ್ಲ