ಬನಶಂಕರಿ ದೇವಿಯ ರಥೋತ್ಸವ - ಭಕ್ತಿಯ ಮಹಾಮೇಳ!
ಹೋಮ್ ಪೇಜ್ಸನಾತನ
ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೇರವರಿದೆ. ಇಂದು ಬನದ ಹುಣ್ಣಿಮೆ ಅಂಗವಾಗಿ ಬೆಳಗ್ಗೆ ಮೃತ್ಯುಂಜಯ ಹೋಮ, ನವಗ್ರಹ ಶಾಂತಿ, ದೇವಿ ಮೂಲ ಮಂತ್ರಿ ಹೋಮ, ರಥಾಂಗ ಹೋಮ, ರಥಬಲಿ ಇತ್ಯಾದಿಗಳು ಅದ್ಧೂರಿಯಾಗಿ ನಡೆದವು. ರಥಾವರೋಹಣ, ಶ್ರೀ ಶಾಕಾಂಬರೀ ದೇವಿಯವರಿಗೆ ಮುತ್ತಿನ ಪಲ್ಲಕ್ಕಿ ಉತ್ಸವಗಳು ವೈಭವಯುತವಾಗಿ ನೆರವೇರಿದವು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ಪುನೀತರಾದರು. ದೇಗುಲದ ಆಡಳಿತಾಧಿ ಮಂಡಳಿ, ಸಿಬ್ಬಂದಿಗಳು, ಅರ್ಚಕರು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾದರು.
