ಬಿ ಎನ್ ಎನ್ ವಾಹಿನಿಯ ವರದಿಯಿಂದ ಎಚ್ಚೆತ್ತ ಸರ್ಕಾರ

ಬನಶಂಕರಿ ಉಪನೋಂದಣಿ ವರ್ಗಾವಣೆಯ ಹಣೆಬರಹ: ಸರ್ಕಾರ vs ಅಧಿಕಾರಿಗಳ ನ್ಯಾಯಾಲಯದ ನಿರ್ಣಯದ ನಿರೀಕ್ಷೆ!

ಬಿಎನ್ಎನ್ ಎಕ್ಸ್‌ಪೋಸ್ಹೋಮ್ ಪೇಜ್ನೊಂದಣಿ

1/11/20251 ನಿಮಿಷ ಓದಿ

ಬಿ ಎನ್ ಎನ್ ಡಿಜಿಟಲ್ ಮಿಡಿಯಾ ವತಿಯಿಂದ ಸರಕಾರ ಹಾಗೂ ಕಂದಾಯ ಸಚಿವರಿಗೆ ಬನಶಂಕರಿ ಉಪ ನೋಂದಣಿ ಕಚೇರಿ ಅಧಿಕಾರಿಗಳ ವಿರುದ್ಧ ಮಾಡಿದ ಅಕ್ರಮ ನೋಂದಣಿ ವಿಚಾರಕ್ಕೆ ಸಂಬಂದಿಸಿದ್ದಂತೆ ಲಾಗಿನ್ ಐಡಿ ಮತ್ತು ವರ್ಗಾವಣೆ ವಿಚಾರ ಕ್ಕೆ ಸಂಬಂಧಿಸಿದ್ದಂತೆ ವ್ಯಾಪಕ ವರದಿ ನೀಡಿದ ಹಿನ್ನಲೆ ಯಲ್ಲಿ ತಾ : 9/1/2025 ರಂದು ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಕಂದಾಯ ಪ್ರಧಾನ ಕಾರ್ಯದರ್ಶಿಗಳು ಶ್ರೀಮತಿ ರಾಶ್ಮಿ ಮಹೇಶ್, ನೋಂದಣಿ ಮತ್ತು ಮುದ್ರಾಂಕ ಆಯುಕ್ತರಾದ ಶ್ರೀ ದಯಾನಂದ ಡಿ ಐ ಜಿ ಆರ್ ಗಳಾದ ಶ್ರೀ ಮಹೇಶ್ ಪಂಡಿತ್ ಎ ಐ ಜಿ ಆರ್ ಗಳಾದ ಶ್ರೀ ಎಚ್ ಎಲ್ ಪ್ರಭಾಕರ ಮತ್ತು ಅಡ್ವೋಕೇಟ್ ಜನರಲ್ ಕರ್ನಾಟಕ ಸರಕಾರ ಜೊತೆಯಲ್ಲಿ ಸರಕಾರಿ ವಕೀಲರು ಜೊತೆಯಲ್ಲಿ ಉಪಸ್ಥಿತರಿದ್ದು ತಾ 15/1/2025ರಂದು ಕರ್ನಾಟಕ ಸರ್ವೋಚ್ಚ್ ನ್ಯಾಯಾಲಯದಲ್ಲಿ ಉಪನೋಂದಣಿ ಅಧಿಕಾರಿಗಳ ವರ್ಗಾವಣೆ ವ್ಯಾಜ್ಯವು ಬರಲಿದ್ದು ಅದಕ್ಕೆ ಪೂರ್ಣ ತಯಾರಿ ಗಳನ್ನು ಮಾಡಿರುವ ಹಾಗೂ ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದ್ದಂತೆ ಸುಮಾರು ಎರಡು ಗಂಟೆ ಕಾಲ ಸಭೆಯಲ್ಲಿ ಚರ್ಚಿಸಲಾಯಿತು ಆದರೆ ಮತ್ತೊಂದು ಕಡೆ ಉಪ ನೋಂದಣಿ ಅಧಿಕಾರಿಗಳು ವ್ಯಾಜಕ್ಕೆ ಸಂಬಂಧ ಪಟ್ಟವರು ನ್ಯಾಯಾಲಯ ಕ್ಕೆ ಸೂಕ್ತ ಕಾರಣ ಹಾಗೂ ದಾಖಲೆಗಳನ್ನು ನೀಡಿರುವುದಾಗಿ ತಿಳಿಸಿ ಕೆಲವು ಮೂಲಗಳಿಂದ ಬಂದಿರುವ ಸುದ್ದಿ ಯಂತೆ ತಮ್ಮ ಪರ ಆಗುವುದೇ ಎಂಬ ನಂಬಿಕೆಯು ಅವರದಾಗಿರುತ್ತದೆ ಆದರೆ ಸರಕಾರದ ನಿಲುವು ಮತ್ತು ಈ ವ್ಯಾಜ್ಯದಲ್ಲಿರುವ ಅಧಿಕಾರಿಗಳ ಹಣೆಬರಹವು ನ್ಯಾಯದೀಶರ ಆದೇಶ ವೇ ಅಂತಿಮವಾಗಿರುತ್ತದೆ ಕಾದು ನೋಡೋಣ ಯಾರ ಪರ ವಿರೋಧವೆಂದು?