ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಂಪಿಯನ್ಸ್ ಲೀಗ್ ಸೀಸನ್ 03, ಸಿದ್ದರಾಮಯ್ಯ ಕಪ್-2025 ರ ಪೋಸ್ಟರ್ ಅನ್ನು ಗೃಹ ಕಚೇರಿ ಕೃಷ್ಣದಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಹಾಸನಹೋಮ್ ಪೇಜ್

1/25/20251 ನಿಮಿಷ ಓದಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಶ್ರೀ ರಾಘವೇಂದ್ರ ಯೂತ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿರುವ ಅರಕಲಗೂಡು ಚಾಂಪಿಯನ್ಸ್ ಲೀಗ್ ಸೀಸನ್ 03, ಸಿದ್ದರಾಮಯ್ಯ ಕಪ್-2025 ರ ಪೋಸ್ಟರ್ ಅನ್ನು ಗೃಹ ಕಚೇರಿ ಕೃಷ್ಣದಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಅರಕಲಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡ ಪ್ರಸನ್ನಕುಮಾರ್ ಎಸ್.ಎಸ್, ನಿವೃತ್ತ ಐ.ಎಸ್.ಎಸ್ ಅಧಿಕಾರಿ ರಾಮೇಗೌಡ, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ನಿರಂಜನ್, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಪ್ರದೀಪ್ ಕುಮಾರ್, ಪಂದ್ಯಾವಳಿಯ ಆಯೋಜಕರಾದ ಹರೀಶ್, ಮಂಜು, ಮಂಜುನಾಥ್, ದಿವಾಕರ್, ವಿಜಯ್ ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.