ಸಂಗೊಳ್ಳಿ ರಾಯಣ್ಣನ ಪುಣ್ಯಸ್ಮರಣೆಯ ದಿನ
ಹೋಮ್ ಪೇಜ್


ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಬದುಕು ಸಮರ್ಪಿಸಿ, ತನ್ನ 32ನೇ ವಯಸ್ಸಿಗೆ ಬ್ರಿಟಿಷ್ ಸರ್ವಾಧಿಕಾರಿ ಸಾಮ್ರಾಜ್ಯದ ನೇಣುಕುಣಿಕೆಗೆ ಕೊರಳೊಡ್ಡಿದ ಮಹಾನ್ ದೇಶಭಕ್ತ ಸಂಗೊಳ್ಳಿ ರಾಯಣ್ಣ ಈ ನೆಲದ ತ್ಯಾಗ ಮತ್ತು ಬಲಿದಾನದ ಸಂಕೇತ.
ಗುಲಾಮಗಿರಿಯ ಕಗ್ಗತ್ತಲಲ್ಲಿ ನರುಳುತ್ತಿದ್ದ ಭಾರತೀಯರನ್ನು ಸ್ವಾತಂತ್ರ್ಯವೆಂಬ ಬೆಳಕಿನೆಡೆಗೆ ಮುನ್ನಡೆಸಿದ ಸಂಗೊಳ್ಳಿ ರಾಯಣ್ಣನ ಸ್ವಾಮಿ ನಿಷ್ಠೆ, ಸಮರ್ಪಣಾಭಾವವನ್ನು ಅವರ ಪುಣ್ಯಸ್ಮರಣೆಯ ದಿನ ಗೌರವದಿಂದ ನೆನೆದು, ನಮಿಸುತ್ತೇನೆ.
- ಮುಖ್ಯಮಂತ್ರಿ ಸಿದ್ದರಾಮಯ್ಯ