ಬಿಸಿ ಮಾಡಿದ ಆಹಾರ ಸೇವಿಸುವುದರಿಂದ ದೇಹಕ್ಕೆ ವಿಷವಾಗಬಹುದು ಎಚ್ಚರ !
ಆರೋಗ್ಯ
ಆಹಾರವನ್ನು ತಾಜಾವಾಗಿ ಸೇವಿಸಿದರೆ ಮಾತ್ರ ಒಳ್ಳೆಯದು . ಆದರೆ ಹೆಚ್ಚಿನವರು ಆಹಾರವನ್ನು ಅನೇಕ ಬಾರಿ ಬಿಸಿ ಮಾಡಿ ಸೇವಿಸುತ್ತಾರೆ. ಇದು ಒಳ್ಳೆಯದಲ್ಲ. ಬಿಸಿ ಮಾಡಿದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಬೆಳಗ್ಗೆ ಮಾಡಿರುವ ಅನ್ನ, ಸಾಂಬಾರ್ ಬಿಸಿಬಿಸಿಯಾಗಿರಬೇಕು ಎಂದು ಹಲವಾರು ಮನೆಗಳಲ್ಲಿ ಪದೇಪದೇ ಬಿಸಿ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ರಾತ್ರಿ ಉಳಿದ ಅಡುಗೆಯನ್ನು ಬಿಸಿ ಮಾಡಿ ಮರುದಿನ ಸೇವಿಸುತ್ತಾರೆ. ಹೀಗೆ ಆಹಾರ ಬಿಸಿ ಮಾಡಿ ತಿನ್ನುವುದು ಅದರಲ್ಲೂ ವಿಶೇಷವಾಗಿ ಕೆಲವೊಂದು ಆಹಾರಗಳನ್ನು ಎರಡನೇ ಬಾರಿ ಬಿಸಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ
