ಕೃಷ್ಣ ಬೈರೇಗೌಡರೇ ನೋಂದಣಿ ಕಛೇರಿಗಳನ್ನು ಬೀದಿಗೆ ತರುತಿದಿದ್ದೀರಾ?

ನೊಂದಣಿ

1/20/20251 ನಿಮಿಷ ಓದಿ

ಬಾಡಿಗೆಗೆ ದುಡ್ಡಿಲ್ಲ, ವಿದ್ಯುತ್ ಗೆ ದುಡ್ಡಿಲ್ಲ, ನೀರಿಗೆ ದುಡ್ಡಿಲ್ಲ, ಸಿಬ್ಬಂದಿಗಳಂತು ಮೊದಲೇ ಇಲ್ಲ ಈ ಎಲ್ಲಾ ಇಲ್ಲಾ ಅನ್ನುವುದು ಹಣವೇಯಿಲ್ಲ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಇಪ್ಪತೆರಡು ಸಾವಿರ ಕೋಟಿ ವರಮಾನಕ್ಕೆ ಗುರಿಯಿದ್ದು ರಾಜ್ಯದ ಉಪ ನೋಂದಣಿ ಇಲಾಖೆಗೆ ತಂತ್ರಾಂಶಗಳನ್ನು ಜೋಡಣೆ ಮಾಡಿ ವರಮಾನ ಸೂರಿಕೆ ಆಗದಂತೆ ಮತ್ತೊಂದು ಕಡೆ ಸಾರ್ವಜನಿಕರು ಮೋಸ ಹೋಗದಂತೆ ಕ್ರಮಗಳನ್ನು ಜರಿಗಿಸಿರುವುದು ಸ್ವಾಗತ ವೇ ಸರಿ ಆದರೆ ಉಪನೋಂದಣಿ ಕಛೇರಿ ಹಾಗೂ ಅಧಿಕಾರಿಗಳನ್ನು ಬೀದಿಗೆ ತರುವುದು ಅತೀ ಶೀಘ್ರದಲ್ಲಿ ಕಾಣಬಹುದು ಕಾರಣ ರಾಜ್ಯದಲ್ಲಿರುವ ಹಲವಾರು ಉಪನೋಂದಣಿ ಕಛೇರಿಗಳು ಹಾಗೂ ಜಿಲ್ಲಾ ಉಪನೋಂದಣಿ ಕಛೇರಿಗಳು ಸರಕಾರದ ಕಟ್ಟಡವಾಗಲಿ ಅಥವಾ ಸ್ವಂತ ಕಟ್ಟಡ ವಾಗಲಿ ಇರುವುದಿಲ್ಲ. ರಾಜ್ಯದಲ್ಲಿ 258 ಉಪನೋಂದಣಿ ಕಚೇರಿಗಳಿದ್ದು 35 ಜಿಲ್ಲಾ ನೋಂದಣಿ ಕಛೇರಿಗಳಿದ್ದು ಜೊತೆಯಲ್ಲಿ ಬೆಂಗಳೂರಿನಲ್ಲಿ ಕಂದಾಯ ಭವನದಲ್ಲಿ ಕೇಂದ್ರ ಕಛೇರಿ ಇರುತ್ತದೆ. ಈ ದೊಡ್ಡ ಸಾಮ್ರಾಜ್ಯ ಹೊಂದಿರುವ ಕೃಷ್ಣ ಬೈರೇಗೌಡ ನೇತೃತ್ವದ ಈ ನೋಂದಣಿ ಇಲಾಖೆಯಲ್ಲಿ ಕೇವಲ 3 ರಿಂದ4 ಸ್ವಂತ ಕಟ್ಟಡಗಳಿದ್ದು ಹಾಲಿ 28ನಿವೇಶನಗಳು ನೋಂದಣಿ ಕಚೇರಿಗಳಿಗೆ ಖಾಲಿ ನಿವೇಶನಗಳು ಮಂಜೂರು ಆಗಿದ್ದು ಆ ಜಾಗದಲ್ಲಿ ಕಛೇರಿ ಕಟ್ಟಡ ನಿರ್ಮಿಸಲು 70ಕೋಟಿ ಅಂದಾಜು ಹಣಕ್ಕೆ ಬೇಡಿಕೆ ಇಡಲಾಗಿದ್ದು ಕಳೆದ ಎರಡು ವರ್ಷಗಳಿಂದ ಹಣವಿಲ್ಲ ವೆಂದು ಆ ಯೋಜನೆ ಮುಟುಕುಗೊಂಡಿರುತ್ತದೆ

ಮತ್ತೊಂದು ಕಡೆ ರಾಜ್ಯದಲ್ಲಿರುವ ಉಪನೋಂದಣಿ ಕಚೇರಿ ಕಟ್ಟಡ ಗಳನ್ನು ಖಾಸಗಿಯವರಿಂದ ಬಾಡಿಗೆಗೆ ಪಡೆದಿದ್ದು ಕಳೆದ 8-10 ತಿಂಗಳುಗಳಿಂದ ಕಟ್ಟಡದ ಬಾಡಿಗೆ ಯನ್ನು ನೀಡದೆ ಉಪ ನೋಂದಣಿ ಅಧಿಕಾರಿಗಳು ಕಟ್ಟಡದ ಮಾಲೀಕರಿಂದ ಛೀ ಮಾರಿ ಹಾಕಿಸಿಕೊಂಡು ಯಾವಾಗ ಬೀದಿಗೆ ಬರುತ್ತೇವೆ ಎಂದು ಭಯದ ವಾತಾವರಣದಲ್ಲಿ ಸಿಬ್ಬಂದಿಗಳು ಇರುತ್ತಾರೆ ಅದೇ ರೀತಿ ಸರಕಾರ ಕಂದಾಯ ವಸೂಲಿ ಮಾಡಲು ತಂತ್ರಜ್ಞಾನವನ್ನು ಅಳವಡಿಸಿರುವುದು ಸರಿಯಾಷ್ಟ್ಟೇ ಆದರೆ ಅದನ್ನು ನಡೆಸಲು ವಿದ್ಯುತ್ ಬೇಕೇ ಬೇಕು ಕಳೆದ 5-6ತಿಂಗಳುಗಳಿಂದ ವಿದ್ಯುತ್ ಮಂಡಳಿಗಳಿಗಳಿಗೆ ಉಪಯೋಗಿಸಿದ ವಿದ್ಯುತ್ ದರವನ್ನು ಪಾವತಿಸದೆ ಪ್ರತಿ ದಿನ ಕಚೇರಿಯ ನೋಂದಣಿ ಅಧಿಕಾರಿಗಳು ವಿದ್ಯುತ್ ಬಿಲ್ಲ್ ಕಲೆಕ್ಟರ್ ಕಾಲಿಗೆ ಬಿದ್ದು ವಿದ್ಯುತ್ ಕಡಿತಗೊಳಿಸದಂತೆ ಬೇಡಿ ಕೊಳ್ಳುತ್ತಿರುತ್ತಾರೆ ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಕೆಲಸ ಮಾಡುವುದು ಹೇಗೆ?

ನಮ್ಮ ಬಿ ಎನ್ ಎನ್ ತಂಡ ಚಾಮರಾಜನಗರ ಜಿಲ್ಲೆಯ ಕುದೇರು ಉಪನೋಂದಣಿ ಕಛೇರಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ದುರಸ್ಥಿತಿ ಗೊಂಡ ಸ್ವಂತ ಕಟ್ಟಡದಿಂದ ಜೂನ್ ತಿಂಗಳು 2022 ರಂದು ಪಕ್ಕದಲ್ಲಿದ್ದ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು ಸರಿಯಷ್ಟೇ.

ಆದರೆ ಈ ಕಛೇರಿಯಿಂದ ವಾಪಸ್ ಸ್ವಂತ ಕಟ್ಟಡಕ್ಕೆ ಹೋಗಲು ಕಾಲವೇ ಕೂಡಿ ಬಂದಿಲ್ಲ ಕಾರಣ ಹಣವಿಲ್ಲ ಹಣವಿಲ್ಲ ವಿಪರ್ಯಾಸ ವೇನೆಂದರೆ ಈ ಕಛೇರಿಯಲ್ಲಿ ಗ್ರೂಪ್ "ಡಿ " ನೌಕರ ಶ್ರೀ ಮಹದೇವಪ್ಪ ಎರಡನೇ ದರ್ಜೆ ಸಹಾಯಕ ಮಹದೇವಪ್ಪ ಮೊದಲನೇ ದರ್ಜೆ ಸಹಾಯಕ ಮಹದೇವಪ್ಪ ಕೊನೆಯಲ್ಲಿ ಉಪನೋಂದಣಿ ಅಧಿಕಾರಿ ಯಾರೆಂದು ನೋಡಿದರೆ ಅವರು ಮಹದೇವಪ್ಪನವರೇ ಆಗಿರುತ್ತಾರೆ.ಇದೆ ರೀತಿ ರಾಜ್ಯದ ಹಲವು ಉಪನೋಂದಣಿ ಕಛೇರಿಗಳಲ್ಲಿ ಸಿಬ್ಬಂದಿಗಳ ಹಣೆಬರಹ ಇದೆ ಆಗಿರುತ್ತದೆ.

ಈ ವಿಚಾರಕ್ಕೆ ಸಂಬಂದಿಸಿದ್ದಂತೆ ಚಾಮರಾಜನಗರ ಜಿಲ್ಲಾ ಉಪನೋಂದಣಿ ಅಧಿಕಾರಿಗಳನ್ನು ಮಾತನಾಡಿಸಿದಾಗ ಸರಕಾರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿರುತ್ತಾರೆ. ಈ ಇಲಾಖೆಯಲ್ಲಿ ನೋಂದಣಿ ಮಹಾ ಪರಿವೀಕ್ಷಕರಾದ ಶ್ರೀ ದಯಾನಂದ ರವರಾಗಲಿ ಕಂದಾಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ಮಹೇಶ್ ರವರು ಇಂತಹ ವಿಚಾರಗಳಿಗೆ ಮುತುವರ್ಜಿ ವಹಿಸಿರುವುದಿಲ್ಲ ಅದರಲ್ಲೂ ಇತ್ತೀಚಿಗೆ ಇಲಾಖೆಯ ಸಿಬ್ಬಂದಿಗಳ ವರ್ಗಾವಣೆ ಯಾವ ಘಳಿಗೆಯಲ್ಲಿ ಮಾಡಿದರೂ ಇವರೆಲ್ಲರೂ ನ್ಯಾಯಾಲಯದ ಮುಂದೆಯೇ ಇರುತ್ತಾರೆ ಮಾನ್ಯ ಕಂದಾಯ ಸಚಿವರೇ ನೋಂದಣಿ ಇಲಾಖೆಯ ಈ ವರದಿಯನ್ನು ಗಂಭೀರವಾಗಿ ತೆಗೆದುಕೊಂಡು ಮುಖ್ಯ ಮಂತ್ರಿಗಳ ಕೈ ಕಾಲು ಹಿಡಿದು ಕೊಡಲೇ ಅಗತ್ಯವಿರುವ ಇಲಾಖೆಗೆ ಬೇಕಾಗಿರುವ ಹಣಕಾಸನ್ನು ಬಿಡುಗಡೆ ಗೊಳಿಸಿ ತಮ್ಮ ನೋಂದಣಿ ಇಲಾಖೆಯ ಮಾನ ಮರ್ಯಾದೆಯನ್ನು ಕಾಪಾಡಿ ಕೊಳ್ಳಿ

ವರದಿ:ಬಿ ಎನ್ ಎನ್ ತಂಡ.