ಎಳನೀರು ಕುಡಿದು ಆರೋಗ್ಯ ಕಾಪಾಡಿ

ಆರೋಗ್ಯ

1/20/20251 ನಿಮಿಷ ಓದಿ

ಎಳನೀರು ಅಮೃತ ಸಮಾನ ಅಂತರೇ ಅದರಲ್ಲಿರುವ ಹೆಚ್ಚಿನ ಪೋಷಕಾಂಶಗಳು ಹಾಗೂ ಹಲವಾರು ಆರೋಗ್ಯ ಪ್ರಯೋಜನಗಳು ಅಮೃತಕ್ಕೆ ಹೋಲಿಸುವಂತೆ ಮಾಡುತ್ತವೆ. ಎಳನೀರಿನಲ್ಲಿರುವ ಪೊಟ್ಯಾಸಿಯಮ್, ಸೋಡಿಯಂ ಮತ್ತು ಮೆಗ್ನೀಸಿಯಮ್‌ ಮುಂತಾದ ಪೋಷಕಾಂಶಗಳು ಅತ್ಯಂತ ಆರೋಗ್ಯಕರವಾಗಿದೆ . ಅಲ್ಲದೇ ಎಳನೀರು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಮತ್ತು ಬಿ ಜೀವಸತ್ವಗಳಂತಹ ಸಣ್ಣ ಪ್ರಮಾಣದ ಜೀವಸತ್ವಗಳನ್ನು ಹೊಂದಿರುತ್ತದೆ. ಅಲ್ಲದೇ ಎಳನೀರಿನಲ್ಲಿ ನೈಸರ್ಗಿಕ ಗುಣಲಕ್ಷಣಗಳನ್ನು ಹೂಂದಿದೆ .