ಬೆಂಗಳೂರಿನಲ್ಲಿ ಮತ್ತೊಂದು ದೇಶದ ರಾಯಭಾರ ಕಛೇರಿ ಆರಂಭ
ಬೆಂಗಳೂರು ನಗರರಾಷ್ಟ್ರೀಯ
ಜನವರಿ ೧೬: ಉದ್ಯಾನ ನಗರಿ ಬೆಂಗಳೂರಿನಲ್ಲಿ ಮತ್ತೊಂದು ದೇಶದ ರಾಯಭಾರ ಕಛೇರಿ ಆರಂಭವಾಗಲಿದೆ. ಬಹಳ ವರ್ಷಗಳ ಬೇಡಿಕೆಯ ಅಮೆರಿಕ ರಾಯಭಾರ ಕಛೇರಿ ಜನವರಿ ೧೭ರಂದು ನಗರದಲ್ಲಿ ಆರಂಭವಾಗಲಿದೆ. ಈ ಮೂಲಕ ಬೆಂಗಳೂರು ವಿಶ್ವದ ವಿವಿಧ ದೇಶಗಳ ಜೊತೆ ಸಂಪರ್ಕ ಹೊಂದಲಿದ್ದು, ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ಅನುಕೂಲವಾಗಲಿದೆ.ಕೇಂದ್ರ ವಿದೇಶಾಂಗ ಖಾತೆ ಸಚಿವ ಎಸ್. ಜೈ. ಶಂಕರ್ ಈ ಕುರಿತು ಮಾಹಿತಿ ನೀಡಿದ್ದಾರೆ. ರಾಜತಾಂತ್ರಿಕ ಭೇಟಿಗಾಗಿ ಸಚಿವರು ಸ್ಪೇನ್‌ನಲ್ಲಿದ್ದಾರೆ. ಅಲ್ಲಿ ಭಾರತೀಯ ನಿವಾಸಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಸಚಿವರು ರಾಯಭಾರ ಕಛೇರಿ ಆರಂಭ ಕುರಿತು ಮಾತನಾಡಿದರು.ಮ್ಯಾಡ್ರಿಡ್‌ನಲ್ಲಿ ಮಾತನಾಡಿದ ಅವರು, "ಬಾರ್ಸಿಲೋನಾದಲ್ಲಿ ಭಾರತೀಯ ರಾಯಭಾರ ಕಛೇರಿ ಆರಂಭವಾಗಲಿದೆ. ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಸ್ಪೇನ್ ರಾಯಭಾರ ಕಛೇರಿಯನ್ನು ಆರಂಭಿಸಲಿದ್ದಾರೆ" ಎಂದು ಹೇಳಿದರು.ಎಸ್. ಜೈಶಂಕರ್ ವಿದೇಶಾಂಗ ಸಚಿವರಾದ ಬಳಿಕ ಮೊದಲ ಬಾರಿಗೆ ಸ್ಟೇನ್ ಪ್ರವಾಸ ಕೈಗೊಂಡಿದ್ದಾರೆ. ಈ ಮಹತ್ವದ ಭೇಟಿಯ ಸಂದರ್ಭದಲ್ಲಿಯೇ ಅವರು ಭಾರತದ ಬೆಂಗಳೂರಿನಲ್ಲಿ ಸ್ಪೇನ್ ರಾಯಭಾರ ಕಛೇರಿ ಆರಂಭದ ಕುರಿತು ಮಾಹಿತಿ ನೀಡಿದರು.ಸಚಿವರು ಮ್ಯಾಡ್ರಿಡ್‌ನಲ್ಲಿ, "ಉಭಯ ದೇಶಗಳ ಜೊತೆ ಉತ್ತಮ ಬಾಂಧವ್ಯವಿದೆ. ಇದನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ. ಪ್ರವಾಸೋದ್ಯಮ ದೃಷ್ಟಿಯಿಂದ ಈ ಬೆಳವಣಿಗೆ ಎರಡೂ ದೇಶಗಳಿಗೆ ಅತಿ ಮುಖ್ಯವಾಗಿತ್ತು" ಎಂದರು.ಪ್ರವಾಸೋದ್ಯಮದ ದೃಷ್ಟಿಯಿಂದ ಸ್ಪೇನ್ ಪ್ರಮುಖ ದೇಶವಾಗಿದೆ. ಅಲ್ಲದೇ ಬೆಂಗಳೂರು ನಗರದಿಂದ ಹಲವಾರು ಜನರು ಸ್ಪೇನ್‌ಗೆ ಭೇಟಿ ನೀಡುತ್ತಾರೆ. ನಗರದಲ್ಲಿಯೇ ರಾಯಭಾರ ಕಛೇರಿ ಆರಂಭವಾದರೆ ಪ್ರವಾಸಿಗರಿಗೆ ವೀಸಾ ಪಡೆಯುವ ಪ್ರಕ್ರಿಯೆ ಸರಳವಾಗಲಿದೆ. ಸದ್ಯ ಬೆಂಗಳೂರು, ಕರ್ನಾಟಕದ ಜನರು ಸ್ಪೇನ್ ಪ್ರವಾಸ ಕೈಗೊಳ್ಳಲು ವೀಸಾ ಪಡೆಯಲು ಮುಂಬೈ ರಾಯಭಾರ ಕಛೇರಿಗೆ ಭೇಟಿ ನೀಡಬೇಕಿದೆ. ಬೆಂಗಳೂರಿನಲ್ಲಿ ಕಛೇರಿ ಆರಂಭವಾದರೆ ವೀಸಾ ಪಡೆಯಲು ಪ್ರಯಾಣ ಮಾಡುವುದು ತಪ್ಪಲಿದೆ. ಜನವರಿ ೧೭ರಂದು ಬೆಂಗಳೂರು ನಗರದಲ್ಲಿ ಅಮೆರಿಕ ರಾಯಭಾರಿ ಕಛೇರಿ ಆರಂಭವಾಗಲಿದೆ. ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ೨೦೨೫ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಛೇರಿ ಆರಂಭವಾಗಲಿದೆ ಎಂದು ಹೇಳಿದ್ದರು. ತಾತ್ಕಾಲಿಕ ಕಛೇರಿಯಲ್ಲಿ ಸದ್ಯ ರಾಯಭಾರ ಕಛೇರಿ ಆರಂಭವಾಗಲಿದ್ದು, ಬಳಿಕ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ.ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಜೆಡ್ಲು÷್ಯ ಮ್ಯಾರಿಯೇಟ್‌ನಲ್ಲಿ ತಾತ್ಕಾಲಿಕ ಕಛೇರಿ ಆರಂಭವಾಗಲಿದೆ. ವೈಟ್‌ಫೀಲ್ಡ್ನಲ್ಲಿ ರಾಯಭಾರಿ ಕಛೇರಿ ಸ್ಥಾಪನೆಯಾಗುವ ನಿರೀಕ್ಷೆ ಇದೆ. ಬೃಹತ್ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಖಾತೆ ಸಚಿವ ಎಂ. ಬಿ. ಪಾಟೀಲ್ ಕಛೇರಿಗೆ ವೈಟ್‌ಫೀಲ್ಡ್ನಲ್ಲಿ ಸ್ಥಳವನ್ನು ನೀಡುವ ಭರವಸೆ ಕೊಟ್ಟಿದ್ದಾರೆ. ಸದ್ಯ ಬೆಂಗಳೂರು, ಕರ್ನಾಟಕದ ಜನರು ಅಮೆರಿಕ ವೀಸಾ ಪಡೆಯಲು ಚೆನ್ನೆöÊ, ಹೈದರಾಬಾದ್‌ಗೆ ಪ್ರಯಾಣಿಸಬೇಕಿದೆ. ಬೆಂಗಳೂರು ನಗರದಲ್ಲೇ ಕಛೇರಿ ಆರಂಭವಾದರೆ ವಿದ್ಯಾರ್ಥಿಗಳಿಗೆ, ಸಾಫ್ಟ್ವೇರ್ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಆಸ್ಟೆçÃಲಿಯಾ ಈಗಾಗಲೇ ಬೆಂಗಳೂರು ನಗರದಲ್ಲಿ ರಾಯಭಾರ ಕಛೇರಿಯನ್ನು ಹೊಂದಿದೆ. ಅಮೆರಿಕ ರಾಯಭಾರ ಕಛೇರಿ ಆರಂಭವಾಗಲಿದೆ. ಸ್ಪೇನ್ ಸಹ ಶೀಘ್ರದಲ್ಲೇ ಕಛೇರಿ ಆರಂಭಿಸಲಿದ್ದು, ವಿವಿಧ ದೇಶಗಳ ಜೊತೆಗಿನ ಬೆಂಗಳೂರು ನಗರದ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ.