ರೈತರಿಗೆ ಇಂಧನ ಇಲಾಖೆಯಿಂದ ಸಿಹಿ ಸುದ್ದಿ 2.5 ಲಕ್ಷ ಅಕ್ರಮ ಪಂಪ್ ಸೆಟ್ಗಳು ಸಕ್ರಮ
ಹೋಮ್ ಪೇಜ್ಬೆಂಗಳೂರು ನಗರ


ಬೆಂಗಳೂರು: ರೈತರಿಗೆ ಇಂಧನ ಇಲಾಖೆ ಗುಡ್ ನ್ಯೂಸ್ ನೀಡಿದ್ದು ಇಲ್ಲಿಯವರೆಗೆ 2.5 ಲಕ್ಷ ಅಕ್ರಮ ಪಂಪ್ ಸೆಟ್ಗಳು ಸಕ್ರಮ ಎಂದು ಘೋಷಿಸಿದೆ.
ವಿಜಯಪುರದಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ಸಚಿವ ಕೆಜೆ ಜಾರ್ಜ್ ಈ ಮಾಹಿತಿ ನೀಡಿದ್ದಾರೆ.
ಇಂಧನ ಇಲಾಖೆಯಿಂದ 2.5 ಲಕ್ಷ ಅಕ್ರಮ ಪಂಪ್ ಸೆಟ್ಗಳನ್ನು ಸಕ್ರಮಗೊಳಿಸಲಾಗಿದ್ದು, ಬಾಕಿ ಇರುವ ೨ ಲಕ್ಷ ಪಂಪ್ ಸೆಟ್ಗಳು ಇನ್ನೊಂದು ವರ್ಷದಲ್ಲಿ ಸಕ್ರಮಗೊಳ್ಳಲಿದೆ.
ಅಕ್ರಮ ಪಂಪ್ ಸೆಟ್ಗಳ ಸಕ್ರಮ ಯೋಜನೆ 2004ರಿಂದಲೇ ಜಾರಿಯಲ್ಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಯೋಜನೆಯಡಿ 4.5 ಲಕ್ಷ ಅರ್ಜಿ ಬಾಕಿ ಇದ್ದವು. ಪ್ರಸ್ತುತ 2.5 ಲಕ್ಷ ಪಂಪ್ ಸೆಟ್ಗಳನ್ನು ಸಕ್ರಮಗೊಳಿಸಲಾಗಿದೆ.
ಬಾಕಿ ಉಳಿದ ಅರ್ಜಿಗಳನ್ನು ಇತ್ಯರ್ಥಗೊಳಿಸಿದ ಬಳಿಕ ಹೊಸದಾಗಿ ಬಂದ ಅರ್ಜಿಗಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಾರ್ಜ್ ತಿಳಿಸಿದರು.