ಮೈಕ್ರೋ ಫೈನಾನ್ಸ್‌ನವರು ಕಿರುಕುಳ ಕೊಟ್ರೆ ಈ ಕೆಲಸ ಮಾಡಿ: ಸಿದ್ದರಾಮಯ್ಯ ಹೇಳಿದ್ದೇನು?

ಹೋಮ್ ಪೇಜ್ರಾಜ್ಯ

1/27/20251 ನಿಮಿಷ ಓದಿ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ನವರ ಕಿರುಕುಳದಿಂದ ಆತ್ಮಹತ್ಯೆ ಹಾಗೂ ದೌರ್ಜನ್ಯದ ಪ್ರಕರಣಗಳು ಮಿತಿ ಮೀರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡಿದೆ. ಇನ್ನು ಮುಂದೆ ಮೈಕ್ರೋ ಫೈನಾನ್ಸ್ ಹಾವಳಿ ತಪ್ಪಿಸಲು ರಾಜ್ಯ ಸರ್ಕಾರವು ಖಡಕ್ನಿರ್ಧಾರಗಳನ್ನು ತೆಗೆದುಕೊಂಡಿದೆ. ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ.
ಜನರಿಗೆ ಖಾಸಗಿ ಹಣಕಾಸು ಸಂಸ್ಥೆಗಳು ಕಿರುಕುಳ ನೀಡುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಮೈಕ್ರೋ ಫೈನಾನ್ಸ್ಗಳಿಂದ ತೊಂದರೆ ಎದುರಿಸುತ್ತಿರುವವರು ದೂರು ನೀಡಿದಲ್ಲಿ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆ ಅಥವಾ ಲೇವಾದೇವಿಗಾರರು ನೀಡುವ ತೊಂದರೆಗಳ ವಿರುದ್ಧ ದೂರು ನೀಡಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದೆ ಎಂದು ಅಭಯ ನೀಡಿದ್ದಾರೆ. ರಿಸರ್ವ್ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ನಿಯಮಗಳನ್ನು ಮೀರಿ ಸಾಲ ವಸೂಲಾತಿ ಮಾಡಲು ಪ್ರಯತ್ನಿಸಿದರೆ, ಸಾಲ ಪಡೆದವರಿಗೆ ಕಿರುಕುಳ ನೀಡಿದರೆ ಅಂತಹ ಸಂಸ್ಥೆಗಳ ಮೇಲೆ ಗಂಭೀರ ಕ್ರಮ ಜರುಗಿಸಲಾಗುವುದು. ಇದು ನಿಶ್ಚಿತ ಎಂದು ಸಿಎಂ ಸಿದ್ದರಾಮಯ್ಯ ಖಡಕ್ಆಗಿ ಹೇಳಿದ್ದಾರೆ.
ರಾಜ್ಯವನ್ನೇ ಬೆಚ್ಚಿಬೀಳಿಸಿದ ಮೈಕ್ರೋ ಫೈನಾನ್ಸ್ ದಂಧೆಗೆ ಕೊನೆಗೂ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಬಿಜೆಪಿ ಹೋರಾಟದ ಎಚ್ಚರಿಕೆಗೆ ಕರ್ನಾಟಕ ಸರ್ಕಾರ ಸರ್ಕಾರ ಮಂಡಿಯೂರಿದೆ. ಮೀಟರ್ ಬಡ್ಡಿ ದಂಧೆಕೋರರಿಗೆ ಕಡಿವಾಣ ಹಾಕಿದ್ದು ಸರಿ. ಆದರೆ 60% ಕಮಿಷನ್ ಪೀಕುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಲಗಾಮು ಹಾಕುವವರು ಯಾರು? ಎಂದು ಬಿಜೆಪಿ ವ್ಯಂಗ್ಯವಾಡಿದೆ. ಮೀಟರ್ ಬಡ್ಡಿ ದಂಧೆಯನ್ನು ನಿಯಂತ್ರಿಸಿದಂತೆ 60% ಕಮಿಷನ್ ದಂಧೆಯನ್ನು ನಿಯಂತ್ರಿಸಲು ಸಿದ್ದರಾಮಯ್ಯ ಸರ್ಕಾರಕ್ಕೆ ಧಮ್ ಇದೆಯೇ? ಎಂದು ಸವಾಲು ಹಾಕಿದೆ. ಬರಗಾಲಕ್ಕೆ ರೈತರ ನಿರಂತರ ಆತ್ಮಹತ್ಯೆ, ಕಲುಷಿತ ನೀರು ಕುಡಿದು ಅಮಾಯಕರ ಸಾವು, ಭ್ರಷ್ಟಾಚಾರಕ್ಕೆ ಬೇಸತ್ತು ಅಧಿಕಾರಿಗಳ ಆತ್ಮಹತ್ಯೆ, ಸರ್ಕಾರದ ನಿರ್ಲಕ್ಷ್ಯಕ್ಕೆ ಬಾಣಂತಿಯರ ಸರಣಿ ಸಾವು ಇದೀಗ ಮೈಕ್ರೊ ಫೈನಾನ್ಸ್ಕಿರುಕುಳಕ್ಕೆ ನೊಂದು ಬಡವರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಇಷ್ಟೆಲ್ಲ ಸಾವು ನೋವುಗಳು ಸಂಭವಿಸುತ್ತಿದ್ದರೂ ಭ್ರಷ್ಟ ಕಾಂಗ್ರೆಸ್ಸರ್ಕಾರ ಕಣ್ಮುಚ್ಚಿ ಕೂತಿದೆ ಎಂದು ರಾಜ್ಯ ಸರ್ಕಾರವನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿತ್ತು. ಮೈಕ್ರೋ ಫೈನಾನ್ಸ್ಗಳ ಹಾವಳಿಯಿಂದಾಗಿ ಊರು ತೊರೆಯುತ್ತಿರುವ, ಮನೆ ತೊರೆಯುತ್ತಿರುವ, ಅಂಗಡಿ ಮಾರುತ್ತಿರುವ, ಮನೆಯಿಂದ ಹೊರಹಾಕುತ್ತಿರುವ, ಅಷ್ಟೇ ಅಲ್ಲದೇ ಮಾಂಗಲ್ಯ ಮಾರುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಸುದ್ದಿಯಾಗುತ್ತಿದೆ. ಇದೆಲ್ಲವನ್ನೂ ನೋಡಿಕೊಂಡು ಸರ್ಕಾರ ಮೌನವಾಗಿದೆ ಎಂದು ದೂರಿತ್ತು. ಜೀವ ಉಳಿಸಬೇಕಾದ ಸರ್ಕಾರ ಬಡವರ ಜೀವ ತೆಗೆಯಲು ಮೈಕ್ರೊ ಫೈನಾನ್ಸ್ಗೆ ಸುಪಾರಿ ಕೊಟ್ಟಿದೆ. ಮೈಕ್ರೊ ಫೈನಾನ್ಸ್ಕಂಪನಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಕ್ರಮ ಕೈಗೊಳ್ಳದೆ ಹೋದರೆ, ರಾಜ್ಯದಲ್ಲಿ ಇನ್ನೂ ಅದೆಷ್ಟು ಜೀವಗಳು ಬಲಿಯಾಗುತ್ತವೆ ಎನ್ನುವುದನ್ನು ಊಹೆ ಮಾಡಲು ಸಾಧ್ಯವಿಲ್ಲ. ಕೂಡಲೇ ಕಾಂಗ್ರೆಸ್ಬಡವರ ಪರ ನಿಲ್ಲಬೇಕಿದೆ ಎಂದು ಆಗ್ರಹಿಸಿತ್ತು.