ಹೆಚ್‌ಕ್ಯೂಎ ಪದೋನ್ನತೆ ನೀಡಿದರು ಬೇಡ ಎಂದು ನ್ಯಾಯಾಲಯದ ಮೊರೆ..

ಹೆಚ್‌ಕ್ಯೂಎ ಆದವರಿಗೆ ಡಿಆರ್ ಭಾಗ್ಯವಿಲ್ಲ ಕೊಡುವವರು ದಡ್ಡರಾದರೆ, ಪಡೆದವರು ಅಯೋಗ್ಯರೇ?

1/7/2025

ನಾನು ಲಂಚ ಪಡೆಯುವುದಿಲ್ಲ ಎಂಬ ನಾಮಫಲಕವನ್ನು ಉಪನೋಂದಣಿ ಕಚೇರಿಯಲ್ಲಿ ಹಾಕಿಕೊಂಡು ಕೆಲಸ ಮಾಡುತ್ತಿರುವ ಓರ್ವ ಹಿರಿಯ ಉಪನೋಂದಣಿ ಅಧಿಕಾರಿಗೆ ಸರ್ಕಾರದ ನಿಯಮದಂತೆ ಪದೋನ್ನತೆ ನೀಡಿದರೂ ಅದನ್ನು ಧಿಕ್ಕರಿಸಿ ಅವರ ಜೊತೆಯಲ್ಲಿ ಕೆಲವು ಉಪನೋಂದಣಿ ಅಧಿಕಾರಿಗಳು ನ್ಯಾಯಾಲಯ ಮೊರೆ ಹೋಗಿದ್ದು ಆಶ್ಚರ್ಯವೇ ಸರಿ! ಮತ್ತೊಂದು ಕಡೆ ಹೆಚ್‌ಕ್ಯೂಎ ಆಗಿ ಪದೋನ್ನತೆ ಪಡೆದು ಉಪನೋಂದಣಿ ಅಧಿಕಾರಿಗಳಾಗಿಯೇ ಸೇವೆಯನ್ನು ಮುಂದುವರೆಸುತ್ತಿರುವ ಕೆಲವು ಅಧಿಕಾರಿಗಳ ದಾರಿ ಒಂದಾಗಿದ್ದರೆ ಇನ್ನು ಕೆಲವು ಹೆಚ್‌ಕ್ಯೂಎಗಳು ತಮಗೆ ಅರ್ಹತೆಯಿದ್ದರೂ ಜಿಲ್ಲಾ ನೋಂದಣಿ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತಿಲ್ಲ ಎಂಬ ಅಳಲು ಮತ್ತೊಂದು ಕಡೆಯಿರುತ್ತದೆ. ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣಭೈರೇಗೌಡರವರ ಮುಂದಾಳತ್ವ ಮತ್ತು ಕಂದಾಯ ಪ್ರಧಾನ ಕಾರ್ಯದರ್ಶಿಗಳು (ಮುದ್ರಾಂಕ) ಶ್ರೀಮತಿ ರಶ್ಮಿಮಹೇಶ್‌ರವರ ಅಧಿಕಾರದಲ್ಲಿ ಹಲವಾರು ಗೊಂದಲಗಳು ನಡೆಯುತ್ತಿರುತ್ತದೆ. ಸರ್ಕಾರದ ನಿಯಮದಂತೆ ಕಳೆದ ತಿಂಗಳು ಕೌನ್ಸಿಲಿಂಗ್ ಮೊರೆಯಲ್ಲಿ ವರ್ಗಾವಣೆಗಳು, ಅಧಿಕಾರಿಗಳು ಸಿಬ್ಬಂದಿಗಳ ಇಚ್ಚೆಯಂತೆ ಮಾಡಿ ಆದೇಶಗಳನ್ನು ಹೊರಡಿಸಿದರು. ಆದರೆ ಕೆಎಟಿ ಆದೇಶಗಳು ಹೊರಬಂದ ಮೇಲೆ ಈಗ ಉಚ್ಚನ್ಯಾಯಾಲಯದಲ್ಲಿ ಉಳಿದುಕೊಂಡಿರುತ್ತದೆ. ಅದರ ಮಧ್ಯೆ ವರ್ಗಾವಣೆಗೊಂಡ ಕೆಲವು ಅಧಿಕಾರಿಗಳು ತಮಗೆ ವರ್ಗಾವಣೆ ಆದ ಜಾಗದಲ್ಲಿ ಸೇರಿದ್ದರೆ ಇನ್ನು ಕೆಲವರು ಜಾಗಬಿಟ್ಟು ಕದಲಿರುವುದಿಲ್ಲ. ಇದನ್ನು ನೋಡಿದರೆ ಇಲಾಖೆ ಎಷ್ಟು ಭದ್ರವಾಗಿದೆ ಎಂದು ತಿಳಿದುಕೊಳ್ಳಬಹುದಾಗಿರುತ್ತದೆ.

ಸರ್ಕಾರ ಸರಿಯಾದ ನಿಯಮಗಳನ್ನು ಮಾಡದೇ ಇರುವುದು ಇಂತಹ ಎಡವಟ್ಟುಗಳಿಗೆ ಕಾರಣವಾಗಿರುತ್ತದೆ. ಈಗಾಗಲೇ ಕಾವೇರಿ ತಂತ್ರಾAಶ ಜಾರಿಯಲ್ಲಿದ್ದು ಕೆಲವು ಉಪನೋಂದಣಿ ಕಚೇರಿಗಳಲ್ಲಿ ಎರಡು ಹುದ್ದೆಗಳು ಬೇಕೆಂಬ ಪ್ರಶ್ನೆಗಳು ಇದ್ದಿರುತ್ತದೆ. ಮಾನ್ಯ ಕಂದಾಯ ಸಚಿವರು ಹಾಗೂ ಪ್ರಧಾನ ಕಾರ್ಯದರ್ಶಿಗಳು (ಮುದ್ರಾಂಕ) ಎಚ್ಚರ ವಹಿಸಿ ಕ್ರಮಕ್ಕೆ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ಬಹಳಷ್ಟು ಕಂಟಕಗಳನ್ನು ಎದುರಿಸಬೇಕಾಗಿರುತ್ತದೆ. ಮುಂದಿನ ಸಂಚಿಕೆಯಲ್ಲಿ ಹೆಚ್ಚಿನ ವಿವರಗಳನ್ನು ನೀಡಲು ಪ್ರಯತ್ನಿಸಿರುತ್ತೇವೆ.