ಆಸ್ತಿ ನೋಂದಣಿ ಮಾಡಲು ೧೫ ದಿನದಲ್ಲಿ ನಾಲ್ಕು ತಾಲ್ಲೂಕುಗಳಲ್ಲಿ ಪ್ರಾಯೋಗಿಕ ಜಿಐಎಸ್ ಜಾರಿ


ಪ್ರಾಮಾಣಿಕವೋ ಅಥವಾ ಅಪ್ರಮಾಣಿಕವೋ? ಎಂಬ ಗೊಂದಲವು ಜನರದಾಗಿದ್ದರೆ ಮಾನ್ಯ ಕಂದಾಯ ಸಚಿವರು ಯಾವುದೇ ಸಿದ್ಧತೆಯಿಲ್ಲದೆ ಏಕಕಾಲದಲ್ಲಿ ತಮಗೆ ತೋಚಿರುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಈಗಾಗಲೇ ಬೆಂಗಳೂರು ನಗರದ ನಿವಾಸಿಗಳು ಇ-ಖಾತೆ ತೊಂದರೆಯಿಂದ ಹೊರಗೆ ಬಂದಿರುವುದಿಲ್ಲ. ಅದರಲ್ಲೂ ಸಾರ್ವಜನಿಕರು ನಮ್ಮ ಕಂದಾಯ ಸಚಿವರಾದ ಶ್ರೀ ಕೃಷ್ಣಭೈರೇಗೌಡರವರಿಗೆ ಇಡೀ ಶಾಪ ಹಾಕುತ್ತಿರುವುದು ಕೇಳಿಬಂದಿರುತ್ತದೆ. ಸುಲಭವಾಗಿ ನೋಂದಣಿಗಳನ್ನು ಮಾಡುತ್ತಿದ್ದ ಸಾರ್ವಜನಿಕರು ಬೆಂಕಿಯಿಂದ ಕುದಿಯುವ ಎಣ್ಣೆಗೆ ಬಿದ್ದಂತೆ ಆಗಿರುತ್ತದೆ. ಕಾರಣ ಪ್ರಾಮಾಣಿಕರೋ ಅಪ್ರಮಾಣಿಕರೋ ನೋಂದಣಿ ಕಚೇರಿಗೆ ಸಾರ್ವಜನಿಕರು ಹೋದಲ್ಲಿ ಯಾವುದೇ ಅಂತರ್ಜಾಲ ಸಮಸ್ಯೆಯಿಲ್ಲದಿದ್ದರೆ ಅವರ ಕೆಲಸವು ಅರ್ಧ ಅಥವಾ ಒಂದು ತಾಸಿನೊಳಗೆ ಕೆಲಸ ಮುಗಿಸಿ ಇಚ್ಚೆಯಿದ್ದಲ್ಲಿ ತಮ್ಮ ಕಾಣಿಕೆಗಳನ್ನು ನೀಡಿ ಸಂತೋಷದಿಂದ ಹೋಗುತ್ತಿದ್ದರು. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಇ-ಖಾತೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದರು ಜನರಿಗೆ ನೆಮ್ಮದಿಯಿಲ್ಲದ್ದಂತೆ ಆಗಿರುತ್ತದೆ. ಅದರಲ್ಲೂ ಈಗ ಮಾನ್ಯ ಸಚಿವರ ಸುದ್ದಿಗೋಷ್ಠಿ ಅದಾಗಿ ಮತ್ತೊಂದು ಹೊಸ ಯೋಜನೆ ನೋಂದಣಿ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹಲವು ಉಪಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಇದೀಗ ಜಿಐಎಸ್ (ಭೌಗೋಳಿಕ ದತ್ತಾಂಶ) ಆಧಾರಿತ ತಂತ್ರಾಂಶ ರೂಪಿಸುವ ಪ್ರಯೋಗಕ್ಕೆ ಮುಂದಾಗಿದೆ. ಆ ಮೂಲಕ ನೋಂದಣಿ ಮುದ್ರಾಂಕ ನಿಗಧಿ ವಿಚಾರದಲ್ಲಿ ನಡೆಯುತ್ತಿರುವ ಕಳ್ಳಾಟಗಳಿಗೆ ಬ್ರೇಕ್ ಹಾಕುವ ಸಂಕಲ್ಪ ತೊಟ್ಟಿದೆ. ನೋಂದಣಿ ಸಂದರ್ಭದಲ್ಲಿ ನಿರ್ಧಿಷ್ಟ ಆಸ್ತಿ ಇರುವ ಪ್ರದೇಶ, ಯಾವ ರಸ್ತೆಗೆ ಹೊಂದಿಕೊಂಡಿದೆ ಎಂಬುದನ್ನು ಲೆಕ್ಕ ಹಾಕಿ, ಅದರ ಪ್ರಕಾರ ಮುದ್ರಾಂಕ ವಸೂಲಿ ಮಾಡಿ ತೆರಿಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಹೊಸ ವ್ಯವಸ್ಥೆಯನ್ನು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಜಾರಿಗೆ ತರುವ ಉದ್ದೇಶ ಹೊಂದಲಾಗಿದೆ. ಆರಂಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜಿಐಎಸ್ ಆಧಾರಿತ ನೋಂದಣಿ ವ್ಯವಸ್ಥೆ ಅನುಷ್ಠಾನವಾಗಲಿದ್ದು, ಬಳಿಕ ಹಂತಹಂತವಾಗಿ ನಗರಕ್ಕೆ ವಿಸ್ತರಣೆಗೊಳ್ಳಲಿದೆ. ಇನ್ನು ೧೫ ದಿನಗಳಲ್ಲಿ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕಂದಾಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಸೋರಿಕೆಗೆ ತಡೆ: ಇ-ಖಾತೆ ಹಾಗೂ ಇತರ ಕಾರಣಗಳಿಂದ ನೋಂದಣಿ ಆದಾಯ ಸಂಗ್ರಹ ಸ್ವಲ್ಪ ತಗ್ಗಿದೆ. ಹೊಸ ವ್ಯವಸ್ಥೆ ಜಾರಿಗೆ ತರುವುದರಿಂದ ತೆರಿಗೆ ಸಂಗ್ರಹ ಹೆಚ್ಚಳವಾಗುತ್ತದೆ. ನೋಂದಣಿಯಲ್ಲಿ ಯಾವುದೇ ಲೋಪ ಇರುವುದಿಲ್ಲ.
ಭೌಗೋಳಿಕ ದತ್ತಾಂಶ ಬಳಕೆ: ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ದತ್ತಾಂಶ ಬಳಸಲಾಗುತ್ತದೆ. ಇ-ಆಡಳಿತ, ಕಂದಾಯ ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜಂಟಿಯಾಗಿ ಜಿಐಎಸ್ ಆಧಾರಿತ ದತ್ತಾಂಶವನ್ನು ಬಳಕೆ ಮಾಡಲಿವೆ.
ಇ-ಖಾತೆ ಸಮಸ್ಯೆ ಶೀಘ್ರ ತೆರೆ: ಹೊಸದಾಗಿ ಜಾರಿಗೆ ತಂದ ಇ-ಖಾತೆ ವ್ಯವಸ್ಥೆಯ ಲೋಪ ಸರಿಪಡಿಸುವ ಕೆಲಸ ನಡೆಯುತ್ತಿದೆ. ಕಂದಾಯ ಇಲಾಖೆ ಇದರ ಜವಾಬ್ದಾರಿ ತೆಗೆದುಕೊಂಡಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಗಳ ಜತೆ ಸಾಕಷ್ಟು ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಬೇಕಾದ ಎಲ್ಲ ಕ್ರಮ ಕೈಗೊಂಡಿದೆ. ಸಮಸ್ಯೆ ಬಗೆಹರಿದ ನಂತರ ಸಂಬಂಧಿಸಿದ ಎಲ್ಲ ಇಲಾಖೆಗಳಲ್ಲಿ ಏಕರೂಪ ಇ-ಖಾತೆ ನೀಡಲಾಗುತ್ತದೆ.
ಮುದ್ರಾಂಕ ನಿಗಧಿ ಹೇಗೆ?: ಸ್ಥಳ ಮಾರಾಟ ಮಾಡುವ ಜಮೀನಿನಲ್ಲಿ ಇರುವ ಕಟ್ಟಡ, ಜಾಗ ಯಾವ ರಸ್ತೆಗೆ ಹತ್ತಿರ ಇದೆ ಎಂಬ ಆಧಾರದಲ್ಲಿ ಮುದ್ರಾಂಕ ಸಾಫ್ಟ್ವೇರ್‌ನಿಂದ ನಿಗಧಿಪಡಿಸಲಾಗುವುದ. ಆ ಬಳಿಕ ನೋಂದಣಿಗಳನ್ನು ಸರಕಾರದ ನಿಯಮಾನುಸಾರ ಮೌಲ್ಯಮಾಪನದೊಂದಿಗೆ ನೋಂದಣಿಗಳನ್ನು ಮಾಡಿ ನಿಯಮಾನುಸಾರ ಸರಕಾರದ ಬೊಕ್ಕಸಕ್ಕೆ ತುಂಬಿಸುವ ಪ್ರಯತ್ನವು ಇದಾಗಿರುತ್ತದೆ.
ತೆರಿಗೆ ಸಂಗ್ರಹ
ನೋಂದಣಿ ಮತ್ತು ಮುದ್ರಾಂಕದಲ್ಲಿ ಈ ವರ್ಷ ೨೬ ಸಾವಿರ ಕೋಟಿ ರೂ.ಗಳ ಸಂಗ್ರಹ ಗುರಿ ಹಾಕಿಕೊಳ್ಳಲಾಗಿದೆ. ಅದರಲ್ಲಿ ೨೪,೫೦೦ ಕೋಟಿ ರೂ. ಸಂಗ್ರಹವಾಗಬಹುದೆಂದು ಅಂದಾಜಿಸಲಾಗಿದೆ. ಕಳೆದ ವರ್ಷಕ್ಕಿಂತ ೪ ಸಾವಿರ ಕೋಟಿ ರೂ.ಗಳು ಹೆಚ್ಚಿಗೆ ಸಂಗ್ರಹವಾಗಲಿದೆ ಎಂದು ಸರ್ಕಾರ ಅಂದಾಜು ಮಾಡಿದೆ.
ಎಲ್ಲೆಲ್ಲಿ ಜಾರಿ?
ಮುಂದಿನ ೧೫ ದಿನಗಳಲ್ಲಿ ಜಿಪಿಎಸ್ ತಂತ್ರಾಂಶ ಸಿದ್ಧವಾಗಲಿದೆ. ಅದನ್ನು ಪ್ರಾಯೋಗಿಕವಾಗಿ ನೆಲಮಂಗಲ, ಹೊಸದುರ್ಗ ತಾಲ್ಲೂಕು ಹಾಗೂ ಕಲಬುರಗಿ ಮತ್ತು ಚಾಮರಾಜನಗರ ಜಿಲ್ಲೆಯ ತಲಾ ಒಂದು ತಾಲ್ಲೂಕಿನಲ್ಲಿ ಜಾರಿಗೆ ತರಲಾಗುತ್ತದೆ. ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಒಟ್ಟಿಗೆ ಅನುಷ್ಟಾನಗೊಳ್ಳಲಿದೆ.
ಹೊಸ ಸಾಫ್ಟ್ವೇರ್ ಕಾರ್ಯ
* ನೋಂದಣಿ ಆಗುವ ಆಸ್ತಿ ಎಲ್ಲಿದೆ ಎಂಬುದರ ಮೇಲೆ ನಿಗಾ
* ಎಷ್ಟು ಪ್ರದೇಶ ಮಾರಾಟ ಎಂಬ ಸಮಗ್ರ ಮಾಹಿತಿ ಸಂಗ್ರಹ
* ಬಳಿಕ ಸ್ವಯಂ ಚಾಲಿತವಾಗಿ ಮುದ್ರಾಂಕ ದರದ ಲೆಕ್ಕಾಚಾರ
* ದರ ಪಾವತಿಸಿ, ದಾಖಲೆಗಳನ್ನು ಸಲ್ಲಿಸಿದ ಬಳಿಕ ನೋಂದಣಿ
* ಮುದ್ರಾಂಕಕ್ಕೆ ಸರ್ವೇ ನಂಬರ್ ಮೇಲೆ ಕ್ಲಿಕ್ ಮಾಡಬೇಕು.
* ಎಷ್ಟು ಪ್ರದೇಶ ಮಾರಾಟ ಎಂದು ನಮೂದಿಸಿದರೆ ದರ ನಿಗಧಿ
ಹೊಸ ವ್ಯವಸ್ಥೆ ಏಕೆ?
* ಭೂ ಮಾರಾಟದ ವೇಳೆ ಅದರಲ್ಲಿನ ಕಟ್ಟಡಗಳ ಮಾಹಿತಿ ಮುಚ್ಚಿಡುವ ಪ್ರಕರಣ ಹೆಚ್ಚುತ್ತಿರುವುದು.
* ನೋಂದಣಿ ಪ್ರದೇಶವನ್ನು ವಿಭಾಗ ಮಾಡಿದಾಗ ಅದಕ್ಕೆ ತಕ್ಕಂತೆ ನೋಂದಣಿ ಶುಲ್ಕ ನಿಗಧಿ ಮಾಡಲಾಗುತ್ತದೆ.
* ಆಸ್ತಿ ರಾಷ್ಟ್ರೀಯ, ರಾಜ್ಯ ಅಥವಾ ಜಿಲ್ಲಾ ರಸ್ತೆಗೆ ಹೊಂದಿಕೊಂಡಿದ್ದರೂ ಹಳ್ಳಿರಸ್ತೆ ಎಂಬಂತೆ ತೋರಿಸಲಾಗುತ್ತದೆ. ಇದರಿಂದ ನೋಂದಣಿ ಶುಲ್ಕ ಕಡಿಮೆಯಾಗುತ್ತದೆ.

