ತಿರುಮಲದ ತಿಮ್ಮಪ್ಪನ ಕ್ಷೇತ್ರದಲ್ಲಿ ಕರ್ನಾಟಕ ಛತ್ರದ 2ನೇ ಹಂತದ ಉದ್ಘಾಟನೆ

ಸನಾತನ

1/21/20251 ನಿಮಿಷ ಓದಿ

ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ತಿರುಮಲವು ಪ್ರಪಂಚದಾದ್ಯಂತ ನೆಲೆಸಿರುವ ಎಲ್ಲಾ ಹಿಂದೂಗಳಿಗೆ ಪವಿತ್ರ ಸ್ಥಳವಾಗಿದೆ, ಏಕೆಂದರೆ ಕಲಿಯುಗದ ಸಮಸ್ಯೆಗಳಿಂದ ಮನವಕುಲವನ್ನು ರಕ್ಷಿಸಲು ಭಗವಾನ್ ಶ್ರೀ ವಿಷ್ಣುವು ಈ ರೂಪವನ್ನು ತೆಗೆದುಕೊಂಡಿದ್ದಾನೆ ಎಂದು ನಂಬಲಾಗಿದೆ.

ತಿರುಮಲದಲ್ಲಿರುವ ಕರ್ನಾಟಕ ರಾಜ್ಯ ಛತ್ರವನ್ನು ವಿಜಯನಗರ ಸಾಮ್ರಾಜ್ಯದ 700 ವರ್ಷಗಳ ಕಾಲದಿಂದ ತಿರುಪತಿಯಲ್ಲಿರುವ ತಿರುಮಲ ದೇವಸ್ಥಾನಗಳಿಗೆ ಐತಿಹಾಸಿಕ ಪ್ರಸ್ತುತತೆ ಮತ್ತು ಸಂಪರ್ಕವನ್ನು ಹೊಂದಿದೆ; ನಂತರ ಮೈಸೂರು ಒಡೆಯರ್ರಿಂದ ಪ್ರೋತ್ಸಾಹವನ್ನು ಮುಂದುವರಿಸಲಾಯಿತು. ತಿರುಮಲದಲ್ಲಿ ಕರ್ನಾಟಕದ ಭಕ್ತಾಧಿಗಳಿಗೆ ಲಭ್ಯವಾಗುತ್ತಿರುವ ಪ್ರಸ್ತುತ ಸೌಲಭ್ಯಗಳು ತಿರುಮಲಕ್ಕೆ ಭೇಟಿ ನೀಡುವ ಜನರ ಕಲ್ಯಾಣಕ್ಕಾಗಿ ಮೈಸೂರು ಸಾಮ್ರಾಜ್ಯದ ಹಿಂದಿನ ರಾಜರು ಮಾಡಿದ ದೇಣಿಗೆ ಮತ್ತು ದತ್ತಿಗಳ ಭಾಗವಾಗಿದೆ.

ಕರ್ನಾಟಕ ಸರಕಾರದ ಮುಜರಾಯಿ ಇಲಾಖೆಯು ತಿರುಮಲಕ್ಕೆ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ತಂಗಲು 232 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಮೂರು ವಸತಿ ಸಂಕೀರ್ಣಗಳು ಮತ್ತು ಒಂದು ಸುಸಜ್ಜಿತ ಕಲ್ಯಾಣ ಮಂಟಪ ಹಾಗೂ ಹಾಲಿ ಇದ್ದ ಪ್ರವಾಸಿ ಸೌಧವನ್ನು ಉನ್ನತೀಕರಿಸುವ ಕಾಮಗಾರಿ ಕೈಗೆತ್ತಿಕೊಂಡಿರುವುದು ಸರಿಯಷ್ಟೆ. ಕರ್ನಾಟಕ ಛತ್ರ ಹಳೇಬೀಡು ವಸತಿ ಕೊಠಡಿ ಗಳಿದ್ದು ಕಳೆದ ವರ್ಷ ಏಪ್ರಿಲ್ ತಿಂಗಳಿ ನಲ್ಲಿ 130 ಕೊಠಡಿಗಳ್ಳುಲ ಹಂಪಿ ಕೊಠಡಿ ಗಳನ್ನು ಲೋಕಾರ್ಪಣೆ ಮಾಡಿದ್ದು

ದಿನಾಂಕ 20.01.2025ರಂದು ಪ್ರಸ್ತುತ ಐಹೊಳೆ ಕಟ್ಟಡದಲ್ಲಿ 110 ಕೊಠಡಿಗಳನ್ನು ಕರ್ನಾಟಕ ಸರಕಾರದ ಮುಜರಾಯಿ ಸಚಿವರಾದ ಶ್ರೀಯುತ ರಾಮಲಿಂಗಾರೆಡ್ಡಿಯವರು ಲೋಕಾರ್ಪಣೆ ಮಾಡಿ ಒಟ್ಟು 318 ಕೊಠಡಿಗಳನ್ನು ಯಾತ್ರಾರ್ಥಿಗಳ ವಸತಿಗಾಗಿ ನೀಡಿದರು. ಈ ಸಂದರ್ಭದಲ್ಲಿ ಅವರು ಮಾಧ್ಯಮಗಳಿಗೆ ಮಾತನಾಡಿದರು.ಅವರು ತಿಳಿಸಿದ್ದಂತೆ ಒಂದು ಸಾವಿರ ಜನ ಕೂರಬಹುದಾದ ಕಲ್ಯಾಣ ಮಂಟಪ ಮತ್ತು ಸುಮಾರು 50ಕೊಠಡಿಗಳ್ಳುಳ ವಿಐಪಿ ಬ್ಲಾಕ್ ಕಾಮಗಾರಿ ಈ ವರ್ಷ ಮೇ ತಿಂಗಳಿನಲ್ಲಿ ಮುಕ್ತಾಯಗೊಳ್ಳಲಿದೆ.

ಆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶ ಸರ್ಕಾರದ ಮುಖ್ಯಮಂತ್ರಿಗಳು ಮತ್ತು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಾಗುತ್ತದೆ ಎಂದು ವರದಿಯಾಗಿರುತ್ತದೆ.

ಐಹೋಳೆ ಅತಿಥಿ ಗ್ರಹ ಉದ್ಘಾಟನೆಗೂ ಮುನ್ನ ಆಗಮಿಕರು ಹಾಗೂ ಪಂಡಿತರಿಂದ ಶಾಸ್ತ್ರೋಕ್ತವಾಗಿ ಹೋಮ-ಹವನಗಳು ನೆರವೇರಿದವು. ಈ ಶುಭ ಸಂದರ್ಭದಲ್ಲಿ ಕಂದಾಯ ಮತ್ತು ಮುಜರಾಯಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಜಕುಮಾರ್ ಖತ್ರಿ, ಮುಜರಾಯಿ ಆಯುಕ್ತ ಶ್ರೀ ಎಮ್ ವ್ಹಿ ವೆಂಕಟೇಶ್, ಜೊತೆಯಲ್ಲಿ ರಾಜ್ಯದ ಕೆಲವು ಶಾಸಕರು ಕಾರ್ಯಕರ್ತರು ಹಾಗೂ ಅಧಿಕಾರಿಗಳು ಜೊತೆಯಲ್ಲಿ ಕರ್ನಾಟಕ ಛತ್ರ ವಿಶೇಷ ಅಧಿಕಾರಿ ಶ್ರೀ ಕೋದಂಡರಾಮ ಹಾಗೂ ಮುಜರಾಯಿ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

ಕೆಲವು ತಿಂಗಳುಗಳ ಹಿಂದೆ ಸದರಿ ಕಟ್ಟಡಗಳ ಉಸ್ತುವಾರಿಯನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಹುನ್ನಾರ ನಡೆದಿತ್ತು. ಆದರೆ ನಮ್ಮ `ಬೃಹತ್ ನಾಡು’ ಪತ್ರಿಕೆಯ ವರದಿಯ ಫಲವಾಗಿ ಕೈ ತಪ್ಪಿರುತ್ತದೆ ಇಲ್ಲಿನ ಕೊಠಡಿ ಸೌಲಭ್ಯಗಳು ಕರ್ನಾಟಕ ಮುಜರಾಯಿ ಭಕ್ತಾಧಿಗಳಿಗೆ ಸಮರ್ಪಕವಾಗಿ ಸಿಗದೆ ತೊಂದರೆಗಳಾಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದನ್ನು ಸರಿಪಡಿಸಬೇಕಾದ ಗುರುತರ ಹೊಣೆಗಾರಿಕೆ ಮುಜರಾಯಿ ಇಲಾಖೆ ಮೇಲಿದೆ. ಭಕ್ತಾಧಿಗಳಿಗೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಬೇಕಿದೆ.

ಈ ಅಭಿವೃದ್ಧಿ ಕಾಮಗಾರಿಗಳ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹಿಂದಿನ ಮುಜರಾಯಿ ಆಯುಕ್ತೆ ಆಗಿದ್ದ ಶ್ರೀಮತಿ ರೋಹಣಿ ಸಿಂಧೂರಿರವರು ಸೇರಿದಂತೆ ಅನೇಕರ ಪಾತ್ರವಿದೆ. ಈ ಉದ್ಘಾಟನೆ ಸಮಾರಂಭಕ್ಕೆ ಪಕ್ಷ ಭೇದ ಭಾವವಿಲ್ಲದೆ ಎಲ್ಲರಿಗೂ ಆಹ್ವಾನ ನೀಡಬೇಕಾಗಿತ್ತು.ಮುಂದಿನ ದಿನಗಳಲ್ಲಿ ಎಲ್ಲರಿಗೂ ಆಮಂತ್ರಣ ನೀಡುವ ಭರವಸೆಯನ್ನು ಮುಜರಾಯಿ ಸಚಿವರು ಭರವಸೆ ನೀಡುತ್ತಾರಾ?? ಇದು ನೆರವೇರುತ್ತದೆಯೇ ಎಂಬುದನ್ನು ಕಾದು ನೋಡೋಣ.