19 ವರ್ಷ ಕಳೆದರೂ ವರ್ಗಾವಣೆ ಇಲ್ಲದ ಸರದಾರ
ಮುಜರಾಯಿ ರುದ್ರೇಶನ ಕರ್ಮಕಾಂಡ ಭಾಗ-2


ಕಳೆದ ಸಂಚಿಕೆಯಲ್ಲಿ ರುದ್ರೇಶನ ಕೆಲವು ಅವತಾರಗಳನ್ನು ನೀಡಲಾಗಿದ್ದು ಈ ಭಾರಿ ಶ್ರೀ ರುದ್ರೇಶ್‌ರವರು ಸರ್ಕಾರಕ್ಕೂ ಹಾಗೂ ಅವರ ಕುಟುಂಬದವರಿಗೂ ಮೋಸ ಮಾಡಿರುವ ದಾಖಲೆಗಳು ಕಾಣಬಹುದಾಗಿರುತ್ತದೆ. ಅದಾಗಿ ೧೯ ವರ್ಷ ಕಳೆದರೂ ಇವರ ವರ್ಗಾವಣೆಯನ್ನು ಮಾನ್ಯ ಆಯುಕ್ತರಾಗಲಿ ಅಥವಾ ಮುಜರಾಯಿ ಸಚಿವರು ಗಂಭೀರವಾಗಿ ತೆಗೆದುಕೊಂಡಿರುವುದಿಲ್ಲ. ಬಹುಶಃ ಮುಜರಾಯಿ ಆಯುಕ್ತರುಗಳು ಸಹ ಶ್ರೀ ರುದ್ರೇಶನ ನಟನೆಗೆ ಶರಣಾಗಿರುತ್ತಾರೆಂಬ ಸಂದೇಹವು ಇರುತ್ತದೆ.
ಈ ಲೇಖನದಲ್ಲಿ ಶ್ರೀ ರುದ್ರೇಶ್‌ರವರು ಕೆಲವು ದಾಖಲೆಗಳನ್ನು ಕಾಣಬಹುದು. ಈ ದಾಖಲೆಗಳು ಮಾನ್ಯ ರುದ್ರೇಶ್‌ರವರು ಅಲ್ಲಿಯೇ ಮುಂದುವರೆದಿದ್ದಲ್ಲಿ ಈ ದಾಖಲೆಗಳು ಕಡಾಖಂಡಿತವಾಗಿಯೂ ಮಾಯವಾಗಿಬಿಡಬಹುದು.
ಮಾನ್ಯ ಮುಜರಾಯಿ ಆಯುಕ್ತರು ಕೂಡಲೇ ಸರ್ಕಾರಕ್ಕೆ ತುರ್ತಾಗಿ ಪತ್ರ ವ್ಯವಹಾರವನ್ನು ಮಾಡಿ ಅವರನ್ನು ಕೇಂದ್ರ ಕಚೇರಿಯಿಂದ ಬೇರೆ ಜಿಲ್ಲೆಗೆ ವರ್ಗಾಯಿಸಿ ಇವರ ವಿರುದ್ಧ ತನಿಖೆ ಮಾಡಬೇಕೆಂದು ತಮ್ಮ ಪತ್ರಿಕಾ ತಂಡ ಹಾಗೂ ಸಾರ್ವಜನಿಕರ ಮನವಿಯಾಗಿರುತ್ತದೆ. ಮಾನ್ಯ ಆಯುಕ್ತರಾಗಲಿ ಅಥವಾ ಸರ್ಕಾರವಾಗಲಿ ಈ ಲೇಖನವನ್ನೇ ದೂರಾಗಿ ಪರಿಗಣಿಸಿ ಅಗತ್ಯ ಕ್ರಮಜರುಗಿಸಲಿ ಎಂದು ಆಶಿಸುತ್ತೇವೆ.

