ಸವದತ್ತಿ ಎಲ್ಲಮ್ಮನ ಗುಡ್ಡವನ್ನು ಕಬ್ಜ ಮಾಡಲು ಪ್ರವಾಸ ಉದ್ಯಮ ಇಲಾಖೆ ಸಂಚು?


ರಾಜ್ಯ ಪ್ರಸಿದ್ಧಿ ‘ಎ’ ವರ್ಗದ ದೇವಾಲಯಗಳಲ್ಲಿ ಒಂದಾದ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನ ಎಲ್ಲಮ್ಮ ಗುಡ್ಡ ದೇವಸ್ಥಾನ ಈಗ ಪ್ರಾಧಿಕಾರ ಆದ ಮೇಲೆ ಕಂಟಕ ಶುರುವಾಗಿರುತ್ತದೆ. ಅದಾಗಿ ದೇವಾಲಯದ ವಿಸ್ತೀರ್ಣ ೮೮ ಎಕರೆಯಿದ್ದು ಅದರ ಜೊತೆಯಲ್ಲಿ ಸುಮಾರು ೧೦೯೭ ಎಕರೆ ದೇವಸ್ಥಾನದ ಹೆಸರಿನಲ್ಲಿದ್ದು ಈ ಜಾಗವನ್ನು ಲಪಟಾಯಿಸಲು ಉಗರಗೋಳ ಹಾಗೂ ಎಲ್ಲಮ್ಮಗುಡ್ಡದ ಗ್ರಾಮದ ಗ್ರಾಮ ಪಂಚಾಯಿತಿಯವರು ಈಗಾಗಲೇ ನ್ಯಾಯಾಲಯದಲ್ಲಿ ವ್ಯಾಜ್ಯ ಹಾಕಿದ್ದು ಒಂದು ಕಡೆಯಿದ್ದರೆ ಮತ್ತೊಂದು ಕಡೆ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್‌ರವರ ಮುಂದಾಳತ್ವದಲ್ಲಿ ಈ ದೇವಾಲಯ ಜಾಗವನ್ನು ಅಭಿವೃದ್ಧಿಗೊಳಿಸುವ ನೆಪದಲ್ಲಿ ಈ ಜಾಗವನ್ನು ಪ್ರವಾಸೋದ್ಯಮ ಚಟುವಟಿಕೆಗಳಿಗಾಗಿ ತೆಗೆದುಕೊಳ್ಳುವ ಪ್ರಯತ್ನವು ಇರುತ್ತದೆ. ಸರ್ಕಾರದ ಮುಜರಾಯಿ ಆಸ್ತಿಯನ್ನು ಯಾವುದೇ ಮಂಡಳಿಯಾಗಲಿ ಅಥವಾ ಗ್ರಾಮ ಪಂಚಾಯಿತಿಯವರಾಗಲಿ ತೆಗೆದುಕೊಳ್ಳಲು ನಿಯಮ ಬಿಡುವುದಿಲ್ಲ. ಒಂದು ವೇಳೆ ಅದು ತೆಗೆದುಕೊಂಡಿದ್ದರೆ ಬಿಪಿಟಿ ಕಾಯಿದೆ ಅಡಿಯಲ್ಲಿ ಅಥವಾ ೨೦೦೨ ಮುಜರಾಯಿ ಕಾಯಿದೆಯ ಪ್ರಕಾರ ಅಥವಾ ೧೯೭೨ ಎನಾಂ ರದ್ದಾಯಿತಿ ಕಾಯಿದೆ ಪ್ರಕಾರ ಪಡೆದುಕೊಳ್ಳಬಹುದಾಗಿತ್ತು. ಆದರೆ ೨೦೨೩ರಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಈಗ ಆ ಜಾಗವನ್ನು ಅಭಿವೃದ್ಧಿಗೊಳಿಸುವ ನೆಪದಲ್ಲಿ ಸಂಚನ್ನು ಹಾಕಿರುವುದು ಕಂಡುಬಂದಿರುತ್ತದೆ. ಈಗಾಗಲೇ ಈ ೮೮ ಎಕರೆ ಪ್ರದೇಶದಲ್ಲಿ ಪ್ರವಾಸೋದ್ಯಮಿ ಇಲಾಖೆಯವರು ಸಾರ್ವಜನಿಕರಿಗೆ ಶೌಚಾಲಯ ಮಾಡಿಕೊಡುವುದಾಗಿ ಬಂದಿದ್ದು ಕೊನೆಗೆ ಆ ಶೌಚಾಲಯ ಕಾಮಗಾರಿ ಆದ ಕೂಡಲೇ ಅವರೇ ಕಬ್ಜ ಮಾಡಲು ಹೊರಟಿರುತ್ತಾರೆಂಬ ಸುದ್ದಿಯು ಇರುತ್ತದೆ. ಕೊನೆಯಲ್ಲಿ ಅಂದಿನ ದೇವಾಲಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು ಕೊನೆಯಲ್ಲಿ ಬಂಡವಾಳ ಹಾಕಿ ಶೌಚಾಲಯವನ್ನು ಕಟ್ಟಿದ್ದಕ್ಕೆ ೫ ವರ್ಷ ದೇಣಿಗೆ ಪಡೆದು ಸಮಾಧಾನ ಮಾಡಿಕೊಂಡಿರುತ್ತಾರೆAಬ ಸುದ್ದಿಯು ಇರುತ್ತದೆ.
ರಾಜ್ಯದಲ್ಲಿ ಅಭಿವೃದ್ಧಿ ಮಾಡುವ ಹಲವು ಯೋಜನೆಗಳಿದ್ದರೂ ಬಹುಶಃ ಹೆಚ್.ಕೆ.ಪಾಟೀಲ್‌ರವರು ದೇವಾಲಯಗಳಿಗೆ ಕೈಯಿಟ್ಟಿರುವುದನ್ನು ನೋಡಿದರೆ ಬಹುಶಃ ಅವರಿಗೂ ಸಂಕಷ್ಟ ಕಾಲ ಶುರುವಾಯಿತು ಎಂಬ ಪ್ರಶ್ನೆಯು ಇರುತ್ತದೆ. ಈಗಾಗಲೇ ಪ್ರವಾಸೋದ್ಯಮಿ ಆಯುಕ್ತರು ಕರ್ನಾಟಕ ಛತ್ರ ತಿರುಮಲದ ವಸತಿಗೃಹವನ್ನು ದೇಣಿಗೆ ಪಡೆಯಲು ಸಭೆಗಳು ನಡೆಸಿ ಒಪ್ಪಂದಗಳು ಮಾಡಿಕೊಳ್ಳುವ ಮುನ್ನ ನಮ್ಮ ಪತ್ರಿಕೆಯಲ್ಲಿ ಲೇಖನ ಮಾಡಲಾಗಿದ್ದು ಕೊನೆಯಲ್ಲಿ ಅದನ್ನು ಮುಟುಕುಗೊಳಿಸಿದರು.






ಇದು ಮುಖಭಂಗವಾದರೂ ರಾಜ್ಯದಲ್ಲಿರುವ ದೇವಾಲಯದ ಕಡೆ ತಿರುಗಿರುತ್ತಾರೆ. ಅದಾಗಿ ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಪತ್ರಿಕೆಯಲ್ಲಿ ಲಭ್ಯವಿರುವ ತಾ|| ೦೫-೦೧-೨೦೦೦ ಇಸವಿಯ ಆದೇಶವನ್ನು ಈ ಲೇಖನದಲ್ಲಿ ಕಾಣಬಹುದು. ಇಂತಹ ಆದೇಶಗಳು ದೇವಸ್ಥಾನದ ಪರವಾಗಿದ್ದು ಈಗ ದೇವಸ್ಥಾನದ ಜಮೀನನ್ನು ಪಡೆಯಲು ಪ್ರವಾಸೋದ್ಯಮಿ ಇಲಾಖೆಯವರು ಗ್ರಾಮ ಪಂಚಾಯಿತಿರವರ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಈ ಜಾಗವನ್ನು ಲಪಟಾಯಿಸಲು ಹೊರಟಿರುವುದು ಕೇಡುಗಾಲಕ್ಕೆ ನಾಯಿ ಮೊಟ್ಟೆಯಿಟ್ಟಂತಾಗಿರುತ್ತದೆ. ಈಗಾಗಲೇ ಬೆಳಗಾವಿ ಜಿಲ್ಲಾಧಿಕಾರಿಗಳ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದು ಪ್ರಕರಣದ ತೀವ್ರತೆ ಗಂಭೀರವಾಗಿರುತ್ತದೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಕ್ಷೇತ್ರದ ಶಾಸಕರು ರೇಣುಕಾ ಎಲ್ಲಮ್ಮ ದೇವಾಲಯದ ಜಾಗವನ್ನು ರಕ್ಷಿಸಲು ಮುಂದಾಗಬೇಕೆಂದು ನಮ್ಮ ಪತ್ರಿಕಾ ತಂಡದ ಮನವಿಯಾಗಿರುತ್ತದೆ.
ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಸಲುವಾಗಿ ಸವದತ್ತಿ ತಾಲ್ಲೂಕಿನ ಉಗರಗೋಳ ಹಾಗೂ ಯಲ್ಲಮ್ಮನಗುಡ್ಡದ ಗ್ರಾಮದ ವಿವಿಧ ವಿ.ಎಸ್. ನಂಬರ್‌ಗಳಲ್ಲಿ ಹಾಗೂ ಬ್ಲಾಕ್ ನಂಬರ್‌ಗಳಲ್ಲಿ ಒಟ್ಟು ೧೦೯೭ ಎಕರೆ ಗೈರಾಣು ಜಮೀನಿನ ಕುರಿತು ಸಂಕ್ಷಿಪ್ತ ಘಟಣಾವಳಿಗಳ ವಿವಿರ ಈ ಕೆಳಗಿನಂತಿವೆ.
೧) ಮಾನ್ಯ ಸರ್ಕಾರದ ನಡುವಳಿ ಆದೇಶ ಸಂಖ್ಯೆ: ಆರ್‌ಡಿ-೨೬/ಎಲ್‌ಜಿಎಲ್-೯೭ ದಿನಾಂಕ: ೧೧-೦೭-೧೯೯೭ರ ಮೂಲಕ. ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕು, ಉಗರಗೋಳ ಗ್ರಾಮದ ವಿವಿಧ ಬ್ಲಾಕ್‌ಗಳಲ್ಲಿ ಒಟ್ಟು ೧೦೯೭ ಎಕರೆ ವಿಸ್ತೀರ್ಣವುಳ್ಳ ಸರಕಾರಿ ಜಮೀನನ್ನು ಕರ್ನಾಟಕ ಭೂಕಂದಾಯ ನಿಯಮಗಳು ೧೯೬೬ ನಿಯಮ ೯೭ (೪)ರನ್ವಯ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ ಭೂ ಕಂದಾಯ ನಿಯಮ ೧೯೬೪ರ ಕಲಂ ೭೧ರ ಪ್ರಕಾರ ಶ್ರೀ ರೇಣುಕಾ ಯಲ್ಲಮ್ಮಾ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ಹಾಗೂ ಯಾತ್ರಾರ್ಥಿಗಳಿಗಾಗಿ ಅವಶ್ಯಕ ಸೌಲಭ್ಯಗಳನ್ನು ಒದಗಿಸಲು ದೇವಾಲಯದ ಹೆಸರಿಗೆ ಕಾಯ್ದಿರಿಸಲು ಆದೇಶಿಸಿದ್ದು ಇರುತ್ತದೆ.
೨) ಮಾನ್ಯ ಜಿಲ್ಲಾಧಿಕಾರಿಗಳ ನಡುವಳಿಕೆ ಆದೇಶದ ಕ್ರಮಾಂಕ:ಆರ್‌ಡಿ/ಎಲ್‌ಬಿಪಿ/ಸಿಆರ್-೧೨೪/೯೬-೯೭ ದಿನಾಂಕ: ೦೬-೦೯-೧೯೯೭ರ ಮೂಲಕ ಸರಕಾರದ ಆದೇಶದ ದಿನಾಂಕ: ೧೧-೦೭-೧೯೯೭ ಪ್ರಕಾರ ಭೂ ಕಂದಾಯ ನಿಯಮಾನುಸಾರ ಉಗರಗೋಳ ಗ್ರಾಮದ ವಿವಿಧ ಬ್ಲಾಕ್‌ಗಳಲ್ಲಿ ಇರುವ ಜಮೀನನ್ನು ಶ್ರೀ ರೇಣುಕಾ ಯಲ್ಲಮ್ಮ ದೇವಾಲಯಕ್ಕೆ ಮಂಜೂರು ಮಾಡಿ ಆದೇಶಿಸಿದ್ದು ಇರುತ್ತದೆ.
೩) ಸದರಿ ಸರ್ಕಾರದ ಆದೇಶ ಮತ್ತು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ಉಗರಗೋಳ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಮಾನ್ಯ ಉಚ್ಚನ್ಯಾಯಾಲಯ ಬೆಂಗಳೂರು ಇಲ್ಲಿ ಡಬ್ಲೂö್ಯಪಿನಂ.೩೦೬೩೭/೧೯೯೭ನೇದ್ದನ್ನು ದಾಖಲಿಸಿದ್ದು, ಮಾನ್ಯ ನ್ಯಾಯಾಲಯವು ಸದರಿ ಪ್ರಕರಣದಲ್ಲಿ ದಿನಾಂಕ: ೨೭-೧೦-೧೯೯೮ರಂದು ಸದರಿ ಆದೇಶಗಳನ್ನು ಪುನರ್ ಪರಿಶೀಲಿಸಿ ಆದೇಶ ಹೊರಡಿಸಲು ಸೂಚಿಸಿದ್ದು ಇರುತ್ತದೆ.
೪) ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಇಲ್ಲಿ ದಾಖಲಾದ ಡಬ್ಲೂö್ಯಪಿ ನಂ.೩೦೬೩೭/೧೯೯೭ರ ಆದೇಶದಂತೆ, ಮಾನ್ಯ ಜಿಲ್ಲಾಧಿಕಾರಿಗಳು, ಬೆಳಗಾವಿ ಅವರು ಈ ಕುರಿತು ತಹಶೀಲ್ದಾರರಿಂದ ಮಾಹಿತಿ ಸಂಗ್ರಹಿಸಿ ಸರ್ವೇ ಮಾಡಿಸಿ, ವರದಿ ಪಡೆದು ಹಾಗೂ ಸ್ಥಳೀಯ ಗ್ರಾಮಸ್ಥರಿಂದ ಯಾವುದೇ ಆಕ್ಷೇಪಗಳು ಬಾರದೇ ಇದ್ದ ಕಾರಣ ಕರ್ನಾಟಕ ಭೂ ಕಂದಾಯ ನಿಯಮ ೧೯೬೬ ನಿಯಮ ೯೭(೪)ರಲ್ಲಿಯ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ ನಂ ೭೧ರನ್ವಯ ಉಗರಗೋಳ ಗ್ರಾಮದ ೧೦೯೭ ಎಕರೆ ಗೈರಾಣು ಜಮೀನನ್ನು ಯಾತ್ರಾರ್ಥಿಗಳಿಗೆ ಸೌಲಭ್ಯ ಒದಗಿಸಲು ಶ್ರೀ ರೇಣುಕಾ ಯಲ್ಲಮ್ಮಾ ದೇವಾಲಯದ ಹೆಸರಿಗೆ ಮಂಜೂರು ಮಾಡಿದ್ದು ಇರುತ್ತದೆ.
೫) ಗ್ರಾಮ ಪಂಚಾಯಿತಿ ಉಗರಗೋಳ ಅವರ ಮಾನ್ಯ ಜಿಲ್ಲಾಧಿಕಾರಿಗಳ ದಿನಾಂಕ: ೧೮.೦೩.೨೦೦೦ರ ಆದೇಶದ ವಿರುದ್ಧ ಡಬ್ಲಯೂಪಿ:೨೨೧೦೬/೨೦೦೧ನ್ನು ದಾಖಲಿಸಿದ್ದು ಮಾನ್ಯ ನ್ಯಾಯಾಲಯವು ದಿನಾಂಕ: ೨೦-೧೨-೨೦೦೨ರಂದು ಕರ್ನಾಟಕ ಭೂ ಕಂದಾಯ ಕಾಯ್ದೆ ನಿಯಮದಡಿ ಮೇಲ್ಮನವಿ ಸಲ್ಲಿಸಲು ಸೂಚಿಸಿ ಪ್ರಕರಣವನ್ನು ವಜಾಗೊಳಿಸಿದ್ದು ಇರುತ್ತದೆ.
೬) ಅಧ್ಯಕ್ಷರು ಗ್ರಾಮ ಪಂಚಾಯತ್ ಉಗರಗೋಳ ಇವರು, ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ಮಾನ್ಯ ಕರ್ನಾಟಕ ಮೇಲ್ಮನವಿ ಪ್ರಾಧಿಕಾರ ಬೆಂಗಳೂರು ಇವರ ನ್ಯಾಯಾಲಯದಲ್ಲಿ ಮೇಲ್ಮನವಿ ಸಂಖ್ಯೆ: ೨೧೦/೨೦೦೩ನೇದ್ದನ್ನು ದಾಖಲಿಸಿದ್ದು ಸದರಿ ಪ್ರಕರಣವನ್ನು ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗಾಯಿಸಿದ್ದು ಇರುತ್ತದೆ.
೭) ಅಧ್ಯಕ್ಷರು, ಗ್ರಾಮ ಪಂಚಾಯಿತಿ ಉಗರಗೋಳ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಇವರು ಮಾನ್ಯ ಜಿಲ್ಲಾಧಿಕಾರಿಗಳು, ಅವರ ನ್ಯಾಯಾಲಯದಲ್ಲಿ ಕ್ರಸಂ:ಎಲ್‌ಬಿಪಿ/ವಿವ-೧೨೪/೧೯೯೬-೯೭ನೇದ್ದನ್ನು ದಾಖಲಿಸಿದ್ದು ಇರುತ್ತದೆ.
೮) ಉಗರಗೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೦೯೭ ಎಕರೆ ಗೈರಾಣು ಜಾಗೆಯನ್ನು ಭೂ ಕಂದಾಯ ನಿಯಮದಡಿ ಶ್ರೀ ರೇಣುಕಾ ಯಲ್ಲಮ್ಮಾ ದೇವಾಲಯದ ಹೆಸರಿಗೆ ದಾಖಲಿಸಿದ್ದರ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು, ಬೆಳಗಾವಿ ಅವರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಮಾನ್ಯ ಜಿಲ್ಲಾಧಿಕಾರಿಗಳು, ಬೆಳಗಾವಿ ಅವರ ನ್ಯಾಯಾಲಯದ ಆದೇಶ ಸಂಖ್ಯೆ: ಕಂಶಾ/ಎಲ್‌ಬಿಪಿ/ವಿವ/೧೨೪/೧೯೯೬-೯೭ ಬೆಳಗಾವಿ ದಿನಾಂಕ: ೧೫-೦೭-೨೦೨೧ರ ಮೂಲಕ ಮಾನ್ಯ ಕರ್ನಾಟಕ ಮೇಲ್ಮನವಿ ನ್ಯಾಯ ಮಂಡಳಿಯವರ ಅಪೀಲ್ ನಂ:೨೧೦/೨೦೦೩ ದಿನಾಂಕ: ೨೩-೦೭-೨೦೧೧ ಆದೇಶದಲ್ಲಿ ನಿರ್ದೇಶಿಸಿದಂತೆ ಅಧ್ಯಕ್ಷರು, ಗ್ರಾಮ ಪಂಚಾಯತ ಉಗರಗೋಳ ಮತ್ತು ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ತಕಾರರಗಳನ್ನು ಪರಿಗಣಿಸಿ ಶ್ರೀ ರೇಣುಕಾಯಲ್ಲಮ್ಮಾ ದೇವಸ್ಥಾನ ಯಲ್ಲಮ್ಮನಗುಡ್ಡಕ್ಕೆ ಬರುವ ಭಕ್ತಾಧಿಗಳಿಗೆ ಹಾಗೂ ಯಾತ್ರಾರ್ಥಿಗಳಿಗೆ ವಾಸ್ತವ್ಯ ಹಾಗೂ ಇತರೆ ಸೌಲಭ್ಯವನ್ನು ಒದಗಿಸಲು ಹಾಗೂ ಅಭಿವೃದ್ಧಿಪಡಿಸಲು ಈ ಕಾರ್ಯಾಲಯದ ಆದೇಶ ನಂ:ಕಂಶಾ/ಎಲ್‌ಬಿಪಿ/ಸಿಆರ್/೧೨೪/೧೯೯೬-೯೭ ದಿನಾಂಕ: ೦೬-೦೯-೧೯೯೭ರ ಪ್ರಕಾರ ಕಾಯ್ದಿಟ್ಟ ಒಟ್ಟು ೧೦೯೭ ಎಕರೆ ಜಮೀನಿನ ೯೪೭ ಎಕರೆ ೦೦ ಗುಂಟೆ ಜಮೀನನ್ನು ಶ್ರೀ ರೇಣುಕಾ ಯಲ್ಲಮ್ಮಾ ದೇವಸ್ಥಾನ ಯಲ್ಲಮ್ಮನಗುಡ್ಡ ತಾ|| ಸವದತ್ತಿ ಇವರ ಹೆಸರಿಗೆ ಕಾಯ್ದೆರಿಸಿ ಈ ಮೊದಲನೆ ಆದೇಶವನ್ನು ಮಾರ್ಪಾಡು ಮಾಡಿ ಉಳಿಕೆ ಕ್ಷೇತ್ರ ೧೫೦ ಎಕರೆ ಜಮೀನನ್ನು ಉಗರಗೋಳ ಗ್ರಾಮದ ರಿ.ಸ.ನಂ ೯೯೩ರಲ್ಲಿ ಆದೇಶದೊಂದಿಗೆ ಲಗತ್ತಿಸಿದ ಕೈ ನಕ್ಷೆಯಲ್ಲಿ ಕೆಂಪು ಶಾಹಿಯಿಂದ ಗುರುತಿಸಿದ ಜಮೀನನ್ನು ಕಾಯ್ದಿರಿಸಿದ ಕ್ಷೇತ್ರದಿಂದ ಕಡಿಮೆ ಮಾಡಿ ಗೋಮಾಳ ಶೀರ್ಷಿಕೆಗೆ ಜೋಡಿಸುವಂತೆ ಆದೇಶಿಸಿದ್ದು ಇರುತ್ತದೆ.
೯) ಮಾನ್ಯ ಜಿಲ್ಲಾಧಿಕಾರಿಗಳ ದಿನಾಂಕ: ೧೫-೦೭-೨೦೨೧ರ ಆದೇಶವನ್ನು ಪ್ರಶ್ನಿಸಿ ಉಗರಗೋಳ ಗ್ರಾಮ ಪಂಚಾಯತ ಅಧ್ಯಕ್ಷರು, ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಗರಗೋಳ ಅವರು, ಮಾನ್ಯ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ ಬೆಂಗಳೂರು ಇಲ್ಲಿ ದಾವಾ ನಂ:೩೪೮/೨೦೨೧ನೇದ್ದರ ದಾವೆಯನ್ನು ದಾಖಲಿಸಿದ್ದು ಮಾನ್ಯ ನ್ಯಾಯಾಲಯವು ದಿನಾಂಖ: ೧೫-೦೭-೨೦೨೧ರಂದು ನೀಡಿದ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿದ್ದು ಇರುತ್ತದೆ.
೧೦) ಮಾನ್ಯ ಕಂದಾಯ ಮೇಲ್ಮನವಿ ನ್ಯಾಯಾಧೀಕರಣ ಬೆಂಗಳೂರು ಇಲ್ಲಿ ದಾಖಲಾದ ದಾವಾ ನಂ:೩೪೮/೨೦೨೧ನೇದ್ದರ ತಡೆಯಾಜ್ಞೆಯನ್ನು ತೆರವುಗೊಳಿಸುವ ಕುರಿತು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ಚಾಲ್ತಿಯಲ್ಲಿರುತ್ತದೆ.
೧೧) ಉಗರಗೋಳದ ಆದಿಶಕ್ತಿ ಫೌಂಡೇಷನ್ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳು ಸೇರಿ ಮಾನ್ಯ ಉಚ್ಚ ನ್ಯಾಯಾಲಯ ಬೆಂಗಳೂರು ಇಲ್ಲಿ ದಾಖಲಿಸಿದ ಡಬ್ಲಯೂಪಿ ನಂ:೨೭೦೪೫/೨೦೨೩ನೇದ್ದಲ್ಲಿ ೧೬ನೇ ಜನವರಿ ೨೦೨೪ರಂದು ಆದಿಶಕ್ತಿ ಫೌಂಡೇಶನ್ ಸಂಘವನ್ನು ಸಾರ್ವಜನಿಕ ಹಿತಾಸಕ್ತಿ ಅಇðಯಂದು ಭಾವಿಸಿ ೩೪೮/೨೦೨೧ರಲ್ಲಿ ಸೇರಿಸಲು ಆದೇಶವನ್ನು ಹೊರಡಿಸರುತ್ತಾರೆ.
೧೨) ಮಾನ್ಯ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ ಬೆಂಗಳೂರು ಇಲ್ಲಿ ದಾವಾ ನಂ: ೩೪೮/೨೦೨೧ರ ಪ್ರಕರಣವು ದಿನಾಂಕ: ೨೪-೦೭-೨೦೨೪ರಂದು ವಿಚಾರಣೆಗೆ ಬಂದು ಆದಿಶಕ್ತಿ ಫೌಂಡೇಷನ್ ಸಂಘವನ್ನು ಸೇರಿಸುವ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ವಾದ ಪ್ರತಿವಾದಗಳು ನಡೆದು ದೇವಾಲಯದ ಪರ ವಕೀಲರು ಸಮಯವನ್ನು ವಿನಂತಿಸಿಕೊಂಡು ಬಂದಿರುತ್ತಾರೆ.
೧೩) ದೇವಾಲಯದ ಪರವಾಗಿ ವಾದ ಮೂಡಿಸುತ್ತಿರುವ ನ್ಯಾಯವಾದಿ ಅವರು ಆಕ್ಷೇಪಣೆಗಳ ಹೇಳಿಕೆಯನ್ನು ಸಿದ್ದಪಡಿಸಿದರು (ದೂರವಾಣಿ ಮೂಲಕ ವಿಚಾರಣೆ)
೧೪) ದಾವಾ ನಂ: ೩೪೮/೨೦೨೧ ನೇದ್ದರ ಪ್ರಕರಣವು ದಿನಾಂಕ: ೨೭-೦೯-೨೦೨೪ರಂದು ವಿಚಾರಣೆಗೆ ಬಂದಾಗ ವಾದಿಗಳ ಪರ ವಕೀಲರು ಸಮಯವನ್ನು ಕೋರಿದ್ದು ಅದಕ್ಕೆ ಮಾನ್ಯ ನ್ಯಾಯಲವು ವಿಚಾರಣೆಯನ್ನು ಮುಂದೂಡಿದ್ದು ಇರುತ್ತದೆ.