ಪ್ರಯಾಗ್ರಾಜ್ ಮಹಾ ಕುಂಭಮೇಳ: ಕಾಲ್ತುಳಿತದಲ್ಲಿ 15 ಜನರ ಸಾವು, ಹಲವಾರು ಮಂದಿಗೆ ಗಾಯ
ರಾಷ್ಟ್ರೀಯಹೋಮ್ ಪೇಜ್
ಮಹಾ ಕುಂಭಮೇಳದಲ್ಲಿ ಕಾಲ್ತುಳಿತದಿಂದ 15 ಜನರು ಜೀವ ಕಳೆದುಕೊಂಡಿದ್ದು ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಯೋಗಿ ಸರಕಾರ ನಿರೀಕ್ಷಿಸಲಾರದಷ್ಟು ಜನೋತ್ಸಮ್ ಪ್ರಯಾಗ ರಾಜ್ಯಕ್ಕೆ ನುಗ್ಗಿದ್ದು ಈ ದಿನ ಬೆಳಗ್ಗೆ ಸುಮಾರು 3:30 ಗಂಟೆ ಸಮಯದಲ್ಲಿ ಈ ದುರಂತ ಸಂಭವಿಸಿರುತ್ತದೆ ಎಂದು ತಿಳಿದು ಬಂದಿರುತ್ತದೆ. ಪ್ರಪಂಚದ ಯಾವುದೇ ಒಂದು ಕ್ರೀಡೆ ಅಥವಾ ಧಾರ್ಮಿಕ ಸಮಾರಂಭಗಳಿಗೆ ಸೇರದೆ ಇರುವ ಜನರು ಈ ಮಹಾ ಕುಂಭ ಮೇಳದಲ್ಲಿ ಕೋಟ್ಯಂತರ ಜನ ಸೇರಿ ಪ್ರಪಂಚದಲ್ಲೇ ಅತೀ ಹೆಚ್ಚು ಜನ ಸಂಖ್ಯೆಯೆಂದು ದಾಖಲೆ ಯಾಗಿರುತ್ತದೆ. ಈ ಮಹಾ ಕುಂಭ ಮೇಳದ ದುರಂತದಲ್ಲಿ ಕೆಲವರು ತಮ್ಮವರು ನಾಪತ್ತೆ ಆಗಿದ್ದಾರೆ ಎಂದು ಗೋಳುಡುತ್ತಿದ್ದಾರೆ.
ಇದು ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕೋಟ್ಯಂತರ ಭಕ್ತರು ಪವಿತ್ರ ಸ್ನಾನ ಮಾಡಲು ಪ್ರಯಾಗ್ರಾಜ್ಗೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತವಾಗಿದೆ.
ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಗಾಯಗೊಂಡವರನ್ನ ಸೆಕ್ಟರ್ 2 ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವಾರು ಜನರು ಕುಟುಂಬಸ್ಥರಿಂದ ಬೇರ್ಪಟ್ಟಿದ್ದಾರೆ. ಇಂದು ಒಂದೇ ದಿನ ಹತ್ತು ಕೋಟಿ ಜನರು ಅಮೃತ ಸ್ನಾನ ಮಾಡುವ ನಿರೀಕ್ಷೆ ಮಾಡಲಾಗಿತ್ತು.
ಆದರೆ 15ರಿಂದ 20 ಕೋಟಿಯಷ್ಟು ಜನರು ಜಮಾಯಿಸಿದ್ದೇ ಕಾಲ್ತುಳಿತಕ್ಕೆ ಕಾರಣವಾಗಿದೆ.
ವಿಐಪಿಗಳಿಗೆ ಪ್ರತ್ಯೇಕ ಮಾರ್ಗ ಸೂಚಿಸಲಾಗಿತ್ತು. ಆದರೆ ಸಾಧು-ಸಂತರು- ಜನಸಾಮಾನ್ಯರಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಮಾಡಿರಲಿಲ್ಲ.
ಎಲ್ಲರೂ ನೆಮ್ಮದಿಯಿಂದಲೇ ಕುಂಭಮೇಳದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆದರೆ ಎಲ್ಲಿಂದ ಬಂದರೋ ಗೊತ್ತಿಲ್ಲ ಕೆಲ ಜನರು ಮುಂದಕ್ಕೆ ಹೋಗುತ್ತಿದ್ದವರು ಏಕಾಏಕಿ ಹಿಂದಕ್ಕೆ ಓಡಿ ಬಂದರು.
ಜನರು ನುಗ್ಗಿಕೊಂಡು ಬಂದಿದ್ದರಿಂದ ನಾನು ನೆಲಕ್ಕೆ ಬಿದ್ದೆ ಎಂದು ನಮ್ಮ ಪ್ರತ್ರಿಕಾ ಮಾಧ್ಯಮ ದ ಮುಂದೆ ತಿಳಿಸಿ ದರು ಇನ್ನು ಕೆಲವರು ಅಲ್ಲಿ ನಿರ್ಮಿಸಿದ ಕಂಬಗಳಿಗೆ ನೂಕು ನುಕಾಟದಲ್ಲಿ ಡಿಕ್ಕಿ ಹೊಡೆದು ಗಾಯ ಗೊಂಡವರು ಹಲವಾರಿರುತ್ತಾರೆ ಅಲ್ಲಿ ಯಾವ ಕಡೆ ಹೋಗಲು ಅವಕಾಶ ಇರಲಿಲ್ಲ. ಪರಿಣಾಮ ಕಾಲ್ತುಳಿತಕ್ಕೆ ಹತ್ತಾರು ಮಂದಿ ಜೀವ ತೆತ್ತಿದ್ದಾರೆ.
ಸ್ಥಳೀಯ ಬಿಜೆಪಿ ಸರ್ಕಾರ ಈ ಬಗ್ಗೆ ಮೊದಲೇ ಎಚ್ಚರ ವಹಿಸಬೇಕಿತ್ತು. ನಾನಾ ವರ್ಗದ ಜನರಿಗೆ ಪ್ರತ್ಯೇಕ ಮಾರ್ಗಗಳ ವ್ಯವಸ್ಥೆ ಮಾಡಿ ಸರದಿ ಸಾಲಿನಲ್ಲಿ ಸ್ನಾನಕ್ಕೆ ಅವಕಾಶ ಮಾಡಿಕೊಡಬೇಕಿತ್ತು. ಇಂದು ಮೌನಿ ಅಮಾವಾಸ್ಯೆ. ಈ ದಿನ ಸ್ನಾನ ಮಾಡಿದರೆ ಸಿದ್ಧಿ ಲಭಿಸುತ್ತದೆ ಎಂಬುದು ನಂಬಿಕೆ. ಕೋಟ್ಯಾಂತರ ಜನ ಇಂದು ಭಾಗವಹಿಸಲಿದ್ದಾರೆ ಎಂದು ತಿಳಿದೂ ಸೂಕ್ತ ವ್ಯವಸ್ಥೆ ಮಾಡದೇ ಹೋದುದು ದುರಂತ.ಮುಂದಾದರು ಉತ್ತರ ಪ್ರದೇಶದ ಸರಕಾರ ಕೊಡಲೇ ಪ್ರಯಾಗ್ರಾಜ್ಯಕ್ಕೆ ಬರುವ ಜನರ ಮೇಲೆ ನಿಗಾವಹಿಸಿ ಸೊಕ್ತ ಭದ್ರತೆಯನ್ನು ನೀಡಿ ಬರುವಂತಹ ಜನರು ಇಂತಹ ದುರಂತ ಕ್ಕೆ ಸಿಲ್ಕಿಕೊಳ್ಳದಿರಲೆಂದು ಆಶೀಸೋಣ. ಬಿ ಎನ್ ಎನ್ ತಂಡ
