'D58' ಬಗ್ಗೆ ಪ್ರೇಮ್ ಏನಂದ್ರು ಗೊತ್ತಾ..! ದರ್ಶನ್ ಬೆನ್ನು ಮೂಳೆ ಪ್ರಾಬ್ಲಂನಿಂದ ನಿಲ್ಲುತ್ತಾ “D58”..?
ಸ್ಯಾಂಡಲ್ ವುಡ್


ನಟ ದರ್ಶನ್ ಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್ ಸಿನಿಮಾ ಘೋಷಣೆ ಆಗಿರುವುದು ಗೊತ್ತೇಯಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿ ಎಲ್ಲಾ ಉಲ್ಟಾ ಪಲ್ಟಾ ಆಗಿತ್ತು. ಇಲ್ಲದೇ ಇದ್ದಿದ್ದರೆ ಇಷ್ಟೊತ್ತಿಗೆ 'ಡೆವಿಲ್' ಸಿನಿಮಾ ಮುಗಿಸಿ ದರ್ಶನ್ ಮತ್ತೊಂದು ಚಿತ್ರಕ್ಕೆ ಸಿದ್ಧರಾಗಬೇಕಿತ್ತು.
'D58' ಬಗ್ಗೆ ಪ್ರೇಮ್ ಏನಂದ್ರು ಗೊತ್ತಾ..!
ದರ್ಶನ್ ಬೆನ್ನು ಮೂಳೆ ಪ್ರಾಬ್ಲಂನಿಂದ ನಿಲ್ಲುತ್ತಾ “D58”..?
ಸದ್ಯ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜಾಮೀನು ಪಡೆದಿರುವುದು ಅವರನ್ನು ನಂಬಿಕೊಂಡ ನಿರ್ಮಾಪಕರಿಗೆ ಸಂತಸ ತಂದಿದೆ. ಜೊತೆಗೆ ಇವತ್ತು ದರ್ಶನ್ ಡಿಸ್ಜಾರ್ಜ ಆಗಿರೋದು ಅಭಿಮಾನಿಗಳಿಗೆ ಸಡಗರ ಸಂಭ್ರಮ ತಂದಿದೆ ಎಸ್ ಹೌದು ಮತ್ತೆ ಡಿ ಬಾಸ್ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರೆ ಎನ್ನುವ ಆಶಾಭಾವನೆ ಶುರುವಾಗಿದೆ. ಇತ್ತ ಜೋಗಿ ಪ್ರೇಮ್ 'KD' ಚಿತ್ರದಲ್ಲಿ ಮುಳುಗಿದ್ದಾರೆ.
ಧ್ರುವ ಸರ್ಜಾ ನಟನೆಯ 'KD' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸದ್ಯ ಡಬ್ಬಿಂಗ್ ಕೆಲಸ ಆರಂಭಿಸಲಾಗಿದೆ. ಡಿಸೆಂಬರ್ನಲ್ಲಿ ಸಿನಿಮಾ ರಿಲೀಸ್ ಎಂದು ಪ್ರೇಮ್ ಹಿಂದೆ ಘೋಷಿಸಿದ್ದರು. ಆದರೆ ಅದು ಸಾಧ್ಯವಾಗುತ್ತಿಲ್ಲ. ಇದೀಗ ಚಿತ್ರದ ಮೊದಲ ಸಾಂಗ್ ರಿಲೀಸ್ ಮಾಡಲು ಪ್ರಯತ್ನದಲ್ಲಿದ್ದಾರೆ ಪ್ರೇಮ್…
'KD' ಚಿತ್ರದ ಡಬ್ಬಿಂಗ್ ವೇಳೆ ಮಾಧ್ಯಮಗಳ ಜೊತೆ ಪ್ರೇಮ್ ಮಾತನಾಡಿದ್ದಾರೆ. ಈ ವೇಳೆ ದರ್ಶನ್ ಜಾಮೀನು ಪಡೆದು ಹೊರ ಬಂದಿದ್ದು 'D58' ಸಿನಿಮಾ ಯಾವಾಗ? ಎನ್ನುವ ಪ್ರಶ್ನೆ ಎದುರಾಗಿದೆ. ಅದಕ್ಕೆ ತಮ್ಮದೇ ಶೈಲಿಯಲ್ಲಿ ಪ್ರೇಮ್ ಉತ್ತರಿಸಿದ್ದಾರೆ. ಸದ್ಯಕ್ಕೆ 'KD' ಸಿನಿಮಾ ಮುಗಿಸಬೇಕು, ಅದರ ಕಡೆಯೇ ನನ್ನ ಗಮನ ಇದೆ ಎಂದಿದ್ದಾರೆ.
"ಮೊದಲು 'KD' ಸಿನಿಮಾ ಮುಗಿಸಿ ರಿಲೀಸ್ ಮಾಡಬೇಕು. ಅದು ಮುಖ್ಯ. ಇಲ್ಲದೇ ಇದ್ದಿದ್ದರೆ ಇಷ್ಟು ಹೊತ್ತಿಗೆ ನಾನು ಹಿಂದಿ ಸಿನಿಮಾ ಮಾಡಬೇಕಿತ್ತು. ಸಾಜಿದ್ ನಾಡಿಯಾವಾಲ ಪ್ರೊಡಕ್ಷನ್ಸ್. ನನಗೇನು ಕಾಸು ಕೊಡ್ತಾರೆ. ಇಲ್ಲಿ 5 ಕೋಟಿ 10 ಕೋಟಿ ಕೊಡೋದು, ಅಲ್ಲಿ 20 ಕೋಟಿ ಕೊಡ್ತಾರೆ. ಆರಾಮಾಗಿ ಹೋಗಿ ಕೆಲಸ ಮಾಡ್ತೀನಿ. ಆದರೆ ನನಗೆ 'KD' ಮುಖ್ಯ" ಎಂದು ಪ್ರೇಮ್ ಹೇಳಿದ್ದಾರೆ.
"ದರ್ಶನ್ ಅವರ ಸಿನಿಮಾ ಮಾಡಬೇಕು. ಈಗಾಗಲೇ ಘೋಷಣೆ ಸಹ ಮಾಡಿದ್ದೀವಿ. ದರ್ಶನ್ ಈಗ ಹೊರ ಬಂದಿದ್ದಾರೆ. ಬೆನ್ನು ಮೂಳೆ ಪ್ರಾಬ್ಲಂ ಇರುವುದರಿಂದ ಇನ್ನು ಸ್ವಲ್ಪ ದಿನ ಸುಧಾರಿಸಿಕೊಳ್ಳಬೇಕು, ಕನಿಷ್ಠ 2 ತಿಂಗಳು ಬೇಕು. ಮೊನ್ನೆ ಕೂಡ ಅವರೊಟ್ಟಿಗೆ ಮಾತನಾಡಿದೆ. ಆರಾಮಾಗಿ ಇದ್ದಾರೆ." ಎರಡು ತಿಂಗಳ ನಂತರ ಶೂಟಿಂಗ್ ಪ್ಲ್ಯಾನ್ ಮಾಡ್ತಿನಿ ಅಂದಿದ್ದಾರೆ ಪ್ರೇಮ್
ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಪರೋಕ್ಷವಾಗಿ ಮಾತನಾಡಿದ ನಿರ್ದೇಶಕ ಪ್ರೇಮ್ "ಏನೋ ಹಣೆ ಬರಹ, ನಸೀಬು ಅಂತಾರಲ್ಲ. ಎಡವಿ ಬಿದ್ದಂಗೆ ಆಗಿದೆ. ಯಾರಿಗೂ ಆ ರೀತಿ ಆಗಬಾರದು. ಮುಂದೆ ನ್ಯಾಯಾಂಗ ವ್ಯವಸ್ಥೆ ಇದೆ ನೋಡೋಣ, ಏನಾಗುತ್ತೋ" ಎಂದು ಪ್ರೇಮ್ ಹೇಳಿದ್ದಾರೆ.
ಇದೇ ವರ್ಷ ದರ್ಶನ್ ಹುಟ್ಟುಹಬ್ಬಕ್ಕೆ 'D58' ಚಿತ್ರದ ಸಣ್ಣ ಮೋಷನ್ ಟೀಸರ್ ಸಹ ಪ್ರೇಮ್ ರಿಲೀಸ್ ಮಾಡಿದ್ದರು. ದರ್ಶನ್ ಖಡಕ್ ವಾಯ್ಸ್ ಓವರ್ ಜೊತೆ ಬಂದಿದ್ದ ಝಲಕ್ ಅಭಿಮಾನಿಗಳ ಮನಗೆದ್ದಿತ್ತು. ಸದ್ಯ ದರ್ಶನ್ ಯಾವಾಗ ಚಿತ್ರೀಕರಣಕ್ಕೆ ವಾಪಸ್ ಬರುತ್ತಾರೆ ಅಂತಾ ಕಾಯ್ತಿದ್ದಿನಿ. ಮೊದಲಿಗೆ 'ಡೆವಿಲ್' ಚಿತ್ರದಲ್ಲಿ ನಟಿಸಬೇಕಿದೆ.
ಪ್ರಕಾಶ್ ನಿರ್ಮಿಸಿ ನಿರ್ದೇಶನದ ಮಾಡುತ್ತಿರುವ 'ಡೆವಿಲ್' ಚಿತ್ರದ ಒಂದು ವಾರ ಚಿತ್ರೀಕರಣ ಸಹ ನಡೆದಿತ್ತು. ಅಷ್ಟರಲ್ಲೇ ದರ್ಶನ್ ಕೈಗೆ ಪೆಟ್ಟಾಗಿತ್ತು. ಸರ್ಜರಿ ಬಳಿಕ ಚೇತರಿಸಿಕೊಂಡು ಮಂಡ್ಯ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಹೋಗಿದ್ದರು. ಚುನಾವಣೆ ಬಳಿಕ ಮತ್ತೆ ಚಿತ್ರೀಕರಣ ಆರಂಭಿಸುವ ಹೊತ್ತಿಗೆ ರೇಣುಕಾಸ್ವಾಮಿ ಪ್ರಕರಣ ಬೆಳಕಿಗೆ ಬಂದು ಜೈಲು ಸೇರುವಂತಾಗಿತ್ತು.
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ದರ್ಶನ್- ಪ್ರೇಮ್ ಜೋಡಿಯ 'D58' ಸಿನಿಮಾ ಬರಬೇಕಿದೆ. ಚಿತ್ರದಲ್ಲಿ ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿ ಸಹ ನಟಿಸುವ ಸಾಧ್ಯತೆ ದಟ್ಟವಾಗಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗೆ ಬರಲಿದೆ.