೧೦ ವರ್ಷ ಕಳೆದರೂ ಎಸ್‌ಡಿಎಗಳಿಗೆ ಪದೋನ್ನತೆ ಭಾಗ್ಯ ಇಲ್ಲ
ಮುಜರಾಯಿ ಕೇಂದ್ರ ಕಚೇರಿಯಲ್ಲಿ ನಿಯಮ ನೀತಿಗಳನ್ನು ಮೀರಿ ಬಹುತೇಕ ಪ್ರಕರಣಗಳಲ್ಲಿ ಪದೋನ್ನತೆಗಳನ್ನು ನೀಡುತ್ತಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಸರಕಾರಿ ನೌಕರರಿಗೆ ಗರಿಷ್ಠ ಹತ್ತು ವರ್ಷ ಅವಧಿ ಮುಗಿದವರಿಗೆ ಪದೋನ್ನತೆ ನೀಡಬೇಕೆಂದು ಆದೇಶವಿರುತ್ತದೆ. ಆದರೆ ಕಳೆದ ೧೦ ವರ್ಷಗಳಿಂದ ರಾಜ್ಯದಲ್ಲಿರುವ ಮುಜರಾಯಿ ೨ನೇ ದರ್ಜೆ ಸಹಾಯಕರಿಗೆ ಪದೋನ್ನತೆ ನೀಡದೆ ವಂಚನೆ ಮಾಡುತ್ತಿರುವ ಪ್ರಕರಣವು ಬೆಳಕಿಗೆ ಬಂದಿರುತ್ತದೆ.
ಈ ಲೇಖನದಲ್ಲಿ ಕಾಣುವ ಸುಮಾರು ೧೦ ಸಿಬ್ಬಂದಿಗಳಿಗೆ ಕೇಂದ್ರ ಕಚೇರಿಯ ಸಿಬ್ಬಂದಿ ಶಾಖೆಯವರು ಈ ಸಿಬ್ಬಂದಿಗಳ ಪದೋನ್ನತೆಗೆ ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಇದಕ್ಕೆ ಕಾರಣ ಸಿಬ್ಬಂದಿ ಶಾಖೆಯ ಹಣದ ದಾಹವೋ ಅಥವಾ ಮನಸ್ಸೋಯಿಚ್ಚೆಯಿಲ್ಲದೆ ಮೂಲೆಗೆ ತಳ್ಳಿರುತ್ತಾರೆಂಬ ಸಂಶಯವು ಇರುತ್ತದೆ.
ಇದೇ ಇಲಾಖೆಯಲ್ಲಿ ಕಳೆದ ೪-೫ ವರ್ಷಗಳಿಂದ ಮೊದಲನೇ ದರ್ಜೆ ಸಹಾಯಕರು, ಅಧೀಕ್ಷಕರು, ಓಎ ಸಮಾನ ಹುದ್ದೆಗಳಿಗೆ ೨-೩ ವರ್ಷಗಳಲ್ಲಿ ಪದೋನ್ನತೆಗಳನ್ನು ನೀಡಿ ಮೆರೆದಿರುತ್ತಾರೆ. ಅದರಲ್ಲೂ ಕೆಲವು ಸಿಬ್ಬಂದಿಗಳು ಇಲಾಖೆಯ ಪರೀಕ್ಷೆಗಳನ್ನು ಉತ್ತೀರ್ಣ ಆಗದಿದ್ದರೂ ಅಂತಹ ಸಿಬ್ಬಂದಿಗಳನ್ನು ಮೊದಲನೇ ಪಟ್ಟಿಗೆ ಸೇರಿಸಿ ಪದೋನ್ನತೆಗಳನ್ನು ನೀಡಿರುತ್ತಾರೆ.
ಇದರಲ್ಲಿ ವಿಶೇಷವಾಗಿ ರುದ್ರೇಶನ ಕೈವಾಡ ಬಹಳಷ್ಟು ಇರುತ್ತದೆ ಎಂಬ ಸುದ್ದಿಯು ಇರುತ್ತದೆ. ಈತ ಎಸ್‌ಡಿಎ, ಎಫ್‌ಡಿಎ ಹಾಗೂ ಈಗ ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದು ಈ ಮಹಾಶಯನಿಗೆ ಎಲ್ಲರ ವಿಚಾರ ನಿಯಮಾನುಸಾರ ತಿಳಿದಿದ್ದರೂ ಯಾವುದನ್ನೂ ಪ್ರಾಮಾಣಿಕವಾಗಿ ಮಾಡಿರುವುದಿಲ್ಲ ಎಂಬ ಮಾತು ಕೇಳಿಬಂದಿರುತ್ತದೆ. ಮಾನ್ಯ ಮುಜರಾಯಿ ಆಯುಕ್ತರು ಈ ವಿಚಾರದಲ್ಲಿ ಅಗತ್ಯ ಕ್ರಮ ಜರುಗಿಸಿ ನ್ಯಾಯ ಒದಗಿಸಬೇಕೆಂದು ನಮ್ಮ ಪತ್ರಿಕೆಯ ಮನವಿಯಾಗಿರುತ್ತದೆ. ಈ ಲೇಖನದಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಕಾಣಬಹುದು.

