ಇಂದು 3ನೇ ಆವೃತ್ತಿಯ ಮಹಿಳಾ ಐಪಿಎಲ್ ಆರಂಭ
ಕ್ರಿಕೆಟ್ಹೋಮ್ ಪೇಜ್


ಇಂದಿನಿಂದ ಬಹುನಿರೀಕ್ಷಿತ ಮಹಿಳಾ ಐಪಿಎಲ್ ಶುರುವಾಗಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ವಸರ್ಸ್ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ವಡೋದರದಲ್ಲಿಸಂಜೆ 7:30ಕ್ಕೆ ನಡೆಯಲಿದೆ. ಈ ಬಾರಿ ಪ್ರಶಸ್ತಿಗಾಗಿ ಒಟ್ಟು 5 ತಂಡಗಳು ಸೆಣಸಾಡಲಿವೆ. ಈ ಬಾರಿ ಹಾಲಿ ಚಾಂಪಿಯನ್ ಆರ್ಸಿಬಿಗೆ ಗಾಯಾಳುಗಳ ಸಮಸ್ಯೆಯೇ ತಲೆನೋವಾಗಿದೆ. ಎಲೈಸಿ ಪೆರ್ರಿ,ಇನ್ನೂ ಕಂಪ್ಲೀಟ್ ಆಗಿ ಫಿಟ್ ಆಗಿಲ್ಲ.ಕಿವೀಸ್ನ ಸ್ಪೋಟಕ ಬ್ಯಾಟರ್ ಸೋಫಿ ಡಿವೈನ್ ಈ ಬಾರಿ ಟೂರ್ನಿಯಲ್ಲಿ ಆಡುತ್ತಿಲ್ಲ. ಕಳೆದ ಬಾರಿ ಆರ್ಸಿಬಿ ಕಪ್ ಗೆಲ್ಲುವಲ್ಲಿ ಪ್ರಮುಕ ಪಾತ್ರ ವಹಿಸಿದ್ದ ಕರ್ನಾಟಕದ ಶ್ರೇಯಾಂಕ ಪಾಟೀಲ್ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಗಾಯದ ಮೇಲೆ ಬರೆ ಎಂಬಂತೆ ಮತ್ತೊಂದು ಸ್ಪಿನ್ನರ್ ಆಶಾ ಶೋಭನಾ ಸಹ ಟೂರ್ನಿಯಲ್ಲಿ ಆಡೋದು ಅನುಮಾನ.ಹೀಗಾಗಿ ಬಹುತೇಕವಾಗಿ ಈ ಬಾರಿ ಆರ್ಸಿಬಿ ತಂಡ ಸ್ಮೃತಿ ಮಂದನಾ,ರಿಚಾ ಘೋಷ್, ವೇಗಿ ರೇಣುಕಾ ಸಿಂಗ್ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ.

