ಗರ್ಭಿಣಿ ಹಸು ಹತ್ಯೆ ಬೆನ್ನಲ್ಲೇ ಮತ್ತೊಂದು ವಿಕೃತಿ!

ಹೋಮ್ ಪೇಜ್ಉಡುಪಿ

1/30/20251 ನಿಮಿಷ ಓದಿ

ಉಡುಪಿ: ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ವಿಕೃತಿ ಮೆರೆದಿದ್ದರು. ಈ ಪ್ರಕರಣಕ್ಕೆಬೆನ್ನಲ್ಲೇ ಸಂಬಂಧಿಸಿದಂತೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಮಾತ್ರವಲ್ಲ, ಕಾರವಾರದಲ್ಲಿ ಕೂಡ ಗರ್ಭಿಣಿ ಹಸುವಿನ ಹತ್ಯೆ ಮಾಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಡುವೆ ಉಡುಪಿಯಲ್ಲಿ ಇನ್ನೊಂದು ಇಂತಹದ್ದೇ ಘಟನೆ ಬೆಳಕಿಗೆ ಬಂದಿದೆ.

ಸೇಲ್ಸ್ ಮ್ಯಾನ್ ಸೋಗಿನಲ್ಲಿ ಬಂದು ಗೋವಿನ ಬಾಲ ಕತ್ತರಿಸಿ ವಿಕೃತಿ!

ಹೌದು, ಉಡುಪಿಯಲ್ಲಿ ಸೇಲ್ಸ್ ಮ್ಯಾನ್ ಸೋಗಿನಲ್ಲಿ ಬಂದು ಗೋವಿನ ಬಾಲ ಕತ್ತರಿಸಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಸಾಲಿಗ್ರಾಮ ಸಮೀಪದ ಗುಂಡ್ಮಿ ಗ್ರಾಮದಲ್ಲಿ ನಡೆದಿದೆ. ಸೇಲ್ಸ್ ಮ್ಯಾನ್ ಸೋಗಿನಲ್ಲಿ ಮನೆಗೆ ಬಂದ ವ್ಯಕ್ತಿ ಈ ಕೃತ್ಯ ಎಸಗಿರುವುದಾಗಿ ಆರೋಪಿಸಿದ್ದಾರೆ. ಗೋವಿನ ಬಾಲ ಕತ್ತರಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪ್ರಡಾಕ್ಟ್ ಸೇಲ್ಗೆ ಬಂದವನಿಂದ ಕೃತ್ಯ

ಗುಂಡ್ಮಿ ಗ್ರಾಮದ ಮಯ್ಯ ಕುಟುಂಬದ ಮನೆಯೊಂದಕ್ಕೆ ಸೇಲ್ಸ್ ಮ್ಯಾನ್ ಸೋಗಿನಲ್ಲಿ ಆಗಮಿಸಿದ್ದ ಆಗಂತುಕ. ಮನೆಯಾಕೆಯನ್ನ ಕರೆದು ಪ್ರಾಡಕ್ಟ್ ಖರೀದಿಸಲು ಕೇಳಿದ್ದಾನೆ. ಪ್ರಾಡಕ್ಟ್ ಬೇಡವೆಂದು ಮಹಿಳೆ ನಿರಾಕರಿಸಿ ಮನೆ ಬಾಗಿಲು ಮುಚ್ಚಿದ್ದಾರೆ. ಇದನ್ನು ಗಮನಿಸಿ ಅಲ್ಲೇ ಇದ್ದ ಎರಡು ವರ್ಷದ ಕರುವಿನ ಬಾಲ ತುಂಡರಿಸಿ ವ್ಯಕ್ತಿ ಪರಾರಿಯಾಗಿದ್ದಾನೆ.

ಹಿಂದೂ ಪರ ಸಂಘಟನೆಗಳಿಂದ ಆಕ್ರೋಶ

ಪ್ರಕರಣದ ಬೆನ್ನಲ್ಲೆ ಹೈನುಗಾರರು ಕೋಟ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳು ವ್ಯಾಪಕ ಆಕ್ರೋಶ ಹೊರಹಾಕುತ್ತಿದ್ದಾರೆ. ಘಟನೆ ಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.