ಹೊಸ ವರ್ಷದ ಸಂಭ್ರಮದಲ್ಲಿ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರದಿಂದ ಶಾಕ್

ಬೆಂಗಳೂರು ನಗರಹೋಮ್ ಪೇಜ್

1/17/20251 ನಿಮಿಷ ಓದಿ

ಹೊಸ ವರ್ಷದ ಸಂಭ್ರಮದಲ್ಲಿ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಶಾಕ್ ನೀಡಿದ್ದು, ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿ ಎಲ್ಲಾ ರೀತಿಯ ಸಾರಿಗೆ ಬಸ್ಗಳ ದರ ಹೆಚ್ಚಳ ಮಾಡಿದೆ. ಅಲ್ಲದೇ ಬೆಂಗಳೂರು ಜನರಿಗೆ ನೀರಿನ ದರದಲ್ಲೂ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ನೀರಿನ ದರದಲ್ಲೂ ಹೆಚ್ಚಳವಾಗಬಹುದು ಎನ್ನಲಾಗಿದೆ.

ಸಾರಿಗೆ ಬಸ್ಗಳ ಟಿಕೆಟ್ ದರ ಹೆಚ್ಚಳದ ಬೆನ್ನಲ್ಲೇ ಇದೀಗ ಮೆಟ್ರೋ ಪ್ರಯಾಣಿಕರಿಗೂ ಶಾಕ್ ನೀಡಿದೆ. ಈ ಹಿನ್ನೆಲೆ ಮುಂದಿನ ದಿನಗಳಲ್ಲಿ ಮೆಟ್ರೋದಲ್ಲಿ ಶೇ 40 ರಿಂದ 45ರವರೆಗೆ ದರ ಹೆಚ್ಚಳವಾಗಲಿದೆ ಎನ್ನಲಾಗಿದೆ. 2017ರಲ್ಲೊಮ್ಮೆ ಮೆಟ್ರೋ ದರದಲ್ಲಿ ಹೆಚ್ಚಳವನ್ನು ಮಾಡಲಾಗಿತ್ತು. ಆ ಬಳಿಕ ಕಳೆದ 7-8 ವರ್ಷಗಳಿಂದ ಮೆಟ್ರೋ ಟಿಕೆಟ್ ದರ ಏರಿಕೆಯೇ ಆಗಿರಲಿಲ್ಲ. ಇದೀಗ ಮೊದಲ ಬಾರಿಗೆ ಮೆಟ್ರೋ ದರದಲ್ಲಿ ಏರಿಕೆ ಮಾಡಲು ಬಿಎಂಆರ್ಸಿಎಲ್ ನಿರ್ಧರಿಸಿದೆ.

ಇನ್ನು ಬಿಎಂಆರ್ಸಿಎಲ್ ಈ ಬಾರಿ ಶೇಕಡಾ 40 ರಿಂದ 45ರಷ್ಷು ದರ ಹೆಚ್ಚಿಸುವ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಇದುವರೆಗೆ ಮೆಟ್ರೋದಲ್ಲಿ ಕನಿಷ್ಟ ಅಂದರೆ ಕೇವಲ 10 ರೂಪಾಯಿ, ಗರಿಷ್ಟ ಅಂದರೆ 60 ರೂಪಾಯಿವರೆಗೆ ಇತ್ತು. ಆದ್ರೆ ಮುಂದಿನ ದಿನಗಳಲ್ಲಿ ಕನಿಷ್ಟ ಟಿಕೆಟ್ ದರ ಹಾಗೇ ಇರಲಿದೆ. ಗರಿಷ್ಟ ಟಿಕೆಟ್ ದರದಲ್ಲಿ 30 ರೂಪಾಯಿ ಹೆಚ್ಚಳವಾಗಲಿದೆ ಎನ್ನಲಾಗಿದೆ. ಅಲ್ಲದೇ ಪ್ರತಿ 2 ಕಿ.ಮೀ ದರ ಪರಿಷ್ಕರಣೆಯಾಗಲಿದೆ. ಇನ್ನು ಈ ಬಗ್ಗೆ ಬಿಎಂಆರ್ಸಿಎಲ್ ನಾಳೆ ಅಥವಾ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದಿದ್ದಾರೆ. ಆ ಬಳಿಕ ಮೆಟ್ರೋ ದರ ಎಷ್ಟು ಹೆಚ್ಚಾಗಿದೆ? ಹೇಗೆಲ್ಲಾ ಏರಿಕೆ ಮಾಡಲಾಗಿದೆ ಎಂಬುದರ ಮಾಹಿತಿ ತಿಳಿಯಬಹುದಾಗಿದೆ.

ಇತ್ತೀಚೆಗೆ ಮೆಟ್ರೋ ಬಹಳಷ್ಟು ಕಡೆ ವಿಸ್ತರಣೆಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿಯೂ ಹಳದಿ ಮಾರ್ಗ ವಿಸ್ತರಣೆಯಾಗಲಿದೆ. ಇದಕ್ಕಾಗಿ ಈಗಾಗಲೇ ಮಂಡಳಿ ಕಾರ್ಯಾರಂಭ ಶುರುಮಾಡಿದೆ. ದಿನದಿಂದ ದಿನಕ್ಕೆ ಮೆಟ್ರೋ ತನ್ನ ಮಾರ್ಗದಲ್ಲಿ ವಿಸ್ತರಣೆ ಮಾಡಿದೆ. ದಿನನಿತ್ಯ ಲಕ್ಷಗಟ್ಟಲೇ ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಮೆಟ್ರೋದಲ್ಲಾಗುವ ವೆಚ್ಚದ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ. ಏನೇ ಆಗಲಿ ಪ್ರಯಾಣಿಕರ ಜೇಬಿಗೆ ಮಾತ್ರ ಕತ್ತರಿ ಬಿದ್ದಿದೆ. ಬೆಲೆ ಏರಿಕೆಗಳ ಬಿಸಿಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದು; ಬದುಕು ದುಬಾರಿಯಾಗುತ್ತಿದೆ. ಆದರೆ ಬರುವ ವರಮಾನ ಮಾತ್ರ ಹಾಗೇ ಇದೆ. ಜನರ ಗೋಳು ಕೇಳೋರು ಯಾರು?

ಬಿಎನ್ ಎನ್