ಬೆಂಗಳೂರಿನ ಎರಡು ಉಪನೋಂದಣಿ ಅಧಿಕಾರಿಗಳು ಅಮಾನತ್ತು

1/7/2025

ಕಳೆದ ತಿಂಗಳು ಬೆಂಗಳೂರಿನ ಕಾಚರಕನಹಳ್ಳಿ ಉಪನೋಂದಣಿ ಕಚೇರಿಯ ಹಿರಿಯ ಉಪನೋಂದಣಿ ಅಧಿಕಾರಿಗಳಾದ ಶ್ರೀಮತಿ ರೂಪರವರು ಸುಮಾರು ೧೫೭ ದಸ್ತಾವೇಜುಗಳು ಕಾನೂನು ಬಾಹೀರವಾಗಿ ಸರ್ಕಾರದ ಜಮೀನುಗಳ ಯೋಜನೆ ಇಲಾಖೆಯ ಅನುಮೋದನೆಯಿಲ್ಲದೆ ನಿವೇಶನಗಳನ್ನು ಕಾನೂನು ಬಾಹೀರವಾಗಿ ದಸ್ತಾವೇಜುಗಳನ್ನು ನೋಂದಣಿ ಮಾಡಿರುತ್ತಾರೆಂದು ಇಲಾಖೆಯ ಅಧಿಕಾರಿಗಳ ತಪಾಸಣೆಯಲ್ಲಿ ಕಂಡು ಬಂದಿರುತ್ತದೆ ಎಂಬ ಅಂಶದಿಂದ ಅವರನ್ನು ಕಾರಣ ಕೇಳಿ ದಿನಾಂಕ: ೧೨-೧೨-೨೦೨೪ರಂದು ನೋಟೀಸ್ ನೀಡಲಾಗಿದ್ದು ಅದಕ್ಕೆ ಅಧಿಕಾರಿಗಳು ಸಮಾಜಯಿಸಿ ನೀಡಿರುತ್ತಾರೆಂಬ ಸುದ್ದಿಯು ಇರುತ್ತದೆ. ಇದೇ ರೀತಿ ಮತ್ತೊಂದು ಪ್ರಕರಣದಲ್ಲಿ ಹೆಸರುಘಟ್ಟ ಉಪನೋಂದಣಿ ಕಚೇರಿಯ ಅಧಿಕಾರಿಗಳು ಸುಮಾರು ೧೭೯ ದಾಖಲೆಗಳನ್ನು ಕಾನೂನು ಬಾಹಿರ ನೋಂದಣಿ ಮಾಡಿರುತ್ತಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ನೋಟೀಸ್ ನೀಡಿದ್ದು ಅವರು ಸಹ ಉತ್ತರವನ್ನು ನೀಡಿರುತ್ತಾರೆಂಬ ಸುದ್ದಿಯು ಇರುತ್ತದೆ. ಆದರೆ ಈಗ ಇವರನ್ನು ದಿನಾಂಕ: ೨೪-೧೨-೨೦೨೪ರಂದು ಅಮಾನತ್ತು ಮಾಡಿರುವುದಾಗಿ ಆದೇಶವು ಹೊರಬಂದಿರುತ್ತದೆ. ಸರ್ಕಾರದ ನಿಯಮದಂತೆ ಕಾವೇರಿ ೨.೦ ತಂತ್ರಾAಶದಲ್ಲಿ ಅಕ್ರಮಗಳು ನಡೆಯುವುದಿಲ್ಲ ಎಂಬ ವಾದವನ್ನು ಮಾನ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣಭೈರೇಗೌಡರವರು ವಿಧಾನಸಭಾ ಕಲಾಪದಲ್ಲಿ ಹಲವು ಭಾರಿ ತಿಳಿಸಿರುತ್ತಾರೆ.

ಆದರೆ ಈ ಅಧಿಕಾರಿಗಳು ಕಾವೇರಿ ೨.೦ ತಂತ್ರಾಂಶದಲ್ಲಿ ನೋಂದಣಿ ಮಾಡಿದ್ದರೂ ಅದನ್ನು ಅಕ್ರಮ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ? ನೋಂದಣಿ ಅಧಿಕಾರಿಗಳು ಹೇಳುವುದು ತಾಂತ್ರಿಕವಾಗಿ ತಿಳುವಳಿಕೆಯಿರುವುದಿಲ್ಲ. ಹಾಗೂ ಇದಕ್ಕೆ ಸಂಬಂಧಪಟ್ಟ ಅಭಿಯಂತರರು ಆಗಿರುತ್ತಾರೆ. ಕಾವೇರಿ ೨.೦ ತಂತ್ರಾAಶದಲ್ಲಿ ಸಾರ್ವಜನಿಕರು ಸಲ್ಲಿಸಿರುವ ದಾಖಲೆಗಳಿಗೆ ಅನುಮೋದನೆ ನೀಡಿ ನೋಂದಣಿ ಮಾಡಿರುವುದಾಗಿ ತಿಳಿಸಿರುತ್ತಾರೆ. ಇದರ ಮಧ್ಯೆ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳು ದಲ್ಲಾಳಿ ವ್ಯಾಪಾರ ಮಾಡಲು ಮುಂದಾಗಿದ್ದು ಆದರೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರಾದ ಶ್ರೀ ದಯಾನಂದರವರಾಗಲಿ ಅಥವಾ ಕಂದಾಯ ಪ್ರಧಾನ ಕಾರ್ಯದರ್ಶಿಗಳು (ನೋಂದಣಿ) ಶ್ರೀಮತಿ ರಶ್ಮಿಮಹೇಶ್‌ರವರು ಸ್ಪಂದಿಸಿರುವುದಿಲ್ಲ ಎಂಬ ಮಾಹಿತಿಯು ಇರುತ್ತದೆ. ಒಟ್ಟಾರೆ ಇವರ ಅಮಾನತ್ತು ಎಂದಿನಂತೆ ನ್ಯಾಯಾಲಯ ಮೊರೆ ಹೋಗಿ ತಡೆಯಾಜ್ಞೆ ತರುವುದು ವಾಡಿಕೆಯಾಗಿರುತ್ತದೆ. ಈ ಲೇಖನದಲ್ಲಿ ಸಂಬಂಧಪಟ್ಟ ಕೆಲವು ದಾಖಲೆಗಳನ್ನು ಕಾಣಬಹುದು. ಮುಂದಿನ ಸಂಚಿಕೆಯಲ್ಲಿ ಹೆಚ್ಚಿನ ವಿವರಗಳನ್ನು ನೀಡಲು ಪ್ರಯತ್ನಿಸುತ್ತೇವೆ.