ಜೆನ್ ಜಿ ಫ್ಯಾಷನ್ಗೆ ಎಂಟ್ರಿ ಕೊಟ್ಟ ವೈಬ್ರೆಂಟ್ ಕ್ವಿರ್ಕಿ ಲೆಗ್ಗಿಂಗ್ಸ್!
ಬಾಲಿವುಡ್
ಸೀದಾ ಸಾದಾ ಹಾಗೂ ಸಿಂಪಲ್ ಪ್ರಿಂಟ್ಸ್ನಲ್ಲಿ ಮಾತ್ರ ಲಭ್ಯವಿದ್ದ ಲೆಗ್ಗಿಂಗ್ಸ್ ಇದೀಗ ವೈಬ್ರೆಂಟ್ ಶೇಡ್ನ ಕ್ವಿರ್ಕಿ ಡಿಸೈನ್ಸ್ನಲ್ಲಿ ಎಂಟ್ರಿ ನೀಡಿವೆ. ಈ ಜನರೇಷನ್ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಟಿ ಅನನ್ಯಾ ಪಾಂಡೇ ಧರಿಸಿದ ಕ್ವಿರ್ಕಿ ಪ್ಯಾಂಟ್ ಕೂಡ ಸಖತ್ ಹಂಗಾಮ ಎಬ್ಬಿಸಿತ್ತು. ಅವರು ಧರಿಸಿ ಇನ್ನೂ ವಾರವಾಗಿಲ್ಲ! ಆಗಲೇ ಈ ಲೆಗ್ಗಿಂಗ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅಂದಹಾಗೆ, ಮಲ್ಟಿ ಕಲರ್ ಶೇಡ್ ಹೊಂದಿರುವ ಈ ಕ್ವಿರ್ಕಿ ಪಾರ್ಟಿವೇರ್ಗಳಾಗಿಯೂ ಬಳಸಬಹುದು. ಕ್ಯಾಶುವಲ್ ಲುಕ್ಗೂ ಧರಿಸಬಹುದು ಎಂದಿದ್ದಾರೆ ಡಿಸೈನರ್ಸ್. ಈಗ ಈ ವೀಡಿಯೋ ಸಖತ್ ವೈರಲ್ ಆಗಿದೆ.
