ವಿಶ್ವ ಹೃದಯ ದಿನ
ಹೋಮ್ ಪೇಜ್ಆರೋಗ್ಯ
1999 ರಿಂದ ಪ್ರತಿ ವರ್ಷದ ಸೆಪ್ಟೆಂಬರ್ ನಲ್ಲಿ ಕೊನೆಯ ಭಾನುವಾರ ವಿಶ್ವ ಹೃದಯ ದಿನವನ್ನು ವಿಶ್ವ ಹೃದಯ ಸಂಸ್ಥೆ ಯು ಆಯೋಜಿಸುತ್ತಿದೆ ಆದರೆ 2011 ರಿಂದ ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ ಕೊನೆಯ ಭಾನುವಾರದ ಬದಲಾಗಿ ೨೯ ಸೆಪ್ಟೆಂಬರ್ ನಂದು ಆಚರಿಸಲಾಗುತ್ತದೆ 2000 ರ ದಶಕದ ಆರಂಭದಲ್ಲಿ ಪ್ರಪಂಚದಾದ್ಯಂತ ಸುಮಾರು 17 ಮಿಲಿಯನ್ ಜನರು ವಾರ್ಷಿಕವಾಗಿ ಹೃದಯರಕ್ತನಾಳದ ಕಾಯಿಲೆಗಳಿಂದ ಸಾವನ್ನಪ್ಪಿದರು. ಹೃದಯಾಘಾತ ಎಂದರೇನು? ಇದು ಏಕೆ ಕಾಣಿಸಿಕೊಳ್ಳುತ್ತದೆ ? ಈ ರೋಗ ಕ್ಕೆ ಔಷಧಿ ಇಲ್ಲವೇ ? ಇದರ ಬಗ್ಗೆ ಸರಕಾರ ಯಾವ ಕ್ರಮ ಕೈಗೂಂಡಿದೆ ಅಂತ ನೋಡಕೂಂಡು ಬರೋಣ ಬನ್ನಿ
ರಕ್ತವನ್ನು ದೇಹದ ಇತರ ಭಾಗಗಳಿಗೆ ಪಂಪ್ ಮಾಡುವ ಮೂಲಕ ರವಾನಿಸುವ ಅತ್ಯಂತ ಪ್ರಮುಖವಾದ ಅಂಗವೇ ಹೃದಯ. ಅಪಧಮನಿಗಳು ಎಂದು ಕರೆಯಲಾಗುವ ರಕ್ತನಾಳಗಳ ಮೂಲಕ ಆಮ್ಲಜನಕವನ್ನು ಪಡೆಯುತ್ತದೆ. ರಕ್ತನಾಳಗಳು ಕಟ್ಟಿಕೊಂಡು ರಕ್ತ ಸಂಚಾರಕ್ಕೆ ಅಡಚಣೆಯುಂಟಾದರೆ, ಹೃದಯದ ಸ್ನಾಯುಗಳಿಗೆ ಅಗತ್ಯವಾದ ರಕ್ತದ ಪೂರೈಕೆಯಾಗದೇ ಅವು ಸಾಯುತ್ತವೆ. ಇದನ್ನೇ ಹೃದಯಾಘಾತ ಎನ್ನಲಾಗುತ್ತೆ . ನಾವು ಬೆಳೆದಂತೆಲ್ಲಾ, ದೇಹದ ವಿವಿಧ ರಕ್ತನಾಳಗಳ ಒಳ ಭಾಗದಲ್ಲಿ ಕೊಬ್ಬಿನ ಶೇಖರಣೆಯಾಗಿ, ಕ್ರಮೇಣ ರಕ್ತ ಸಂಚಾರಕ್ಕೆ ಅಡಚಣೆಯುಂಟಾಗುತ್ತದೆ. ಈ ರಕ್ತ ನಾಳ ಕಿರಿದಾಗುವಿಕೆಯನ್ನು ಅಥೆರೋಸ್ಕ ಲೆರೋಸಿಸ್ ಎಂದು ಕರೆಯಲಾಗುತ್ತದೆ. ಮಹಿಳೆಯರಿಗಿಂತ ಪುರುಷರಲ್ಲಿ ಹೃದಯಾಘಾತ ಹೆಚ್ಚು. ಈಸ್ಟ್ರೋಜನ್ ಮತ್ತು ಪ್ರೋಜೆಸ್ಟ್ರೋನ್ ಗಳೆಂಬ ಮಹಿಳೆಯರ ಲಿಂಗ ಹಾರ್ಮೋನುಗಳ ಪ್ರಭಾವದಿಂದಾಗಿ, ಮಹಿಳೆಯರಲ್ಲಿ ಹೃದಯಾಘಾತ ಕೊಂಚ ಕಡಿಮೆಯೇ ಎನ್ನಬಹುದು.
ಹೃದಯಾಘಾತವು ವ್ಯಕ್ತಿಯ ಮೇಲೆ ಪರಿಣಾಮ ಬೀರುವ ಭಯಾನಕ ಪರಿಸ್ಥಿತಿಗಳಲ್ಲಿ ಒಂದಾಗಿದ್ದು , ಹೃದಯ ಸ್ನಾಯುವಿನ ಒಂದು ವಿಭಾಗಕ್ಕೆ ಆಮ್ಲಜನಕ-ಸಮೃದ್ಧ ರಕ್ತದ ಹರಿವು ಇದ್ದಕ್ಕಿದ್ದಂತೆ ನಿರ್ಬಂಧಿಸಿದಾಗ ಈ ಘಟನೆ ಸಂಭವಿಸುತ್ತದೆ. ಈ ಅಡಚಣೆಯು ಹೃದಯಕ್ಕೆ ಅಗತ್ಯವಾದ ಆಮ್ಲಜನಕವನ್ನು ಪಡೆಯುವುದಿಲ್ಲ. ಇದು ಅಪಾಯಕಾರಿಯಾಗಬಹುದು, ಏಕೆಂದರೆ ರಕ್ತದ ಹರಿವು ಅಡ್ಡಿಪಡಿಸಿದ ಹೃದಯದ ವಿಭಾಗವು ಸಾಯಲು ಪ್ರಾರಂಭವಾಗುತ್ತದೆ. ಹೃದಯಾಘಾತದಿಂದ ಸಂಭವಿಸುವ ಸಾವು ತಪ್ಪಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹಾತ್ವಾಕಾಂಕ್ಷಿ 'ಡಾ. ಪುನೀತ್ ರಾಜ್ ಕುಮಾರ್ ಹೃದಯಜ್ಯೋತಿ' ಯೋಜನೆಯಡಿ 7 ತಿಂಗಳಲ್ಲಿ ಸುವರ್ಣ ಸಮಯದಲ್ಲಿ 240 ಜೀವಗಳ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಯೋಜನೆಯ 2ನೇ ಹಂತಕ್ಕೆ ಚಾಲನೆ ನೀಡಿದ ನಂತರದಲ್ಲಿ ಜೀವ ರಕ್ಷಕವಾಗಿರುವ ಟೆನೆಸ್ಟೆ ಪ್ಲೆಸ್ ಇಂಜೆಕ್ಷನ್ ಒದಗಿಸಲಾಗುತ್ತಿದೆ. 25 ಸಾವಿರ ರೂ. ಮೊತ್ತದ ಈ ಚುಚ್ಚುಮದ್ದು ಹೃದಯಾಘಾತಕ್ಕೆ ಒಳಗಾದವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಇದರಿಂದ ರೋಗಿಯ ಹೃದಯದ ರಕ್ತನಾಳದಲ್ಲಿ ಹೆಪ್ಪುಗಟ್ಟಿರುವ ರಕ್ತ ತಿಳಿಗೊಂಡು, ಎದೆನೋವು ಕಡಿಮೆಯಾಗಿ ಪ್ರಾಣಾಪಾಯ ತಪ್ಪಲಿದೆ. ಬಳಿಕ ರೋಗಿಯನ್ನು ಹಬ್ ಕೇಂದ್ರಗಳಿಗೆ ರವಾನಿಸಿ ಹೆಚ್ಚಿನ ಚಿಕಿತ್ಸೆ ಒದಗಿಸಲಾಗುತ್ತದೆ ಅಂತ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ .
ಹೃದಯ ಜ್ಯೋತಿ ಎಂದರೆ : ಎದೆನೋವು ಕಾಣಿಸಿಕೊಂಡವರು 'ಸ್ಪೋಕ್' ಕೇಂದ್ರಗಳಿಗೆ ಭೇಟಿ ನೀಡುವ ವೇಳೆ ಎಐ ತಂತ್ರಜ್ಞಾನ ಬಳಸಿ ಕೇವಲ 5 ನಿಮಿಷದೊಳಗೆ ರೋಗಿಯ ಹೃದಯದ ಆರೋಗ್ಯ ಸ್ಥಿತಿಯನ್ನು ಪತ್ತೆಹಚ್ಚಲಾಗುವುದು. ಅಂದರೆ ರೋಗಿ ಆಸ್ಪತ್ರೆಗೆ ಬಂದ ಕೂಡಲೇ ಇಸಿಜಿ ಪರೀಕ್ಷೆ ನಡೆಸಿ ಅದನ್ನು ಹಬ್ ಕೇಂದ್ರಗಳಿಗೆ ರವಾನಿಸಲಾಗುವುದು. ವರದಿ ಆಧರಿಸಿ ತಜ್ಞರ ಸೂಚನೆ ಮೇರೆಗೆ ರೋಗಿಗೆ ಇಂಜೆಕ್ಷನ್ ಹಾಗೂ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಚಿಕಿತ್ಸೆಗೆ ಸಂಬಂಧಪಟ್ಟ ಆಸ್ಪತ್ರೆಗೆ ಶಿಫಾರಸು ಮಾಡಲಾಗುವುದು. ರಾಜ್ಯ ಸರ್ಕಾರ ಯೋಜನೆಗೆ ಮೊದಲ ಹಂತದಲ್ಲಿ 7 ಕೋಟಿ ರೂ. ಮತ್ತು 2ನೇ ಹಂತದಲ್ಲಿ 25 ಕೋಟಿ ರೂ. ಅನುದಾನ ಒದಗಿಸಿದೆ. ಈ ಯೋಜನೆಯನ್ನು ನಾಲ್ಕು ಹಂತದಲ್ಲಿ ವಿಸ್ತರಿಸಲಾಗುತ್ತಿದ್ದು , ಆರೋಗ್ಯ ಇಲಾಖೆಯು 2025ರ ಡಿಸೆಂಬರ್ ಅಂತ್ಯದೊಳಗೆ ಯೋಜನೆಯನ್ನು ಎಲ್ಲ ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲು ಗುರಿ ಹೊಂದಿದೆ ಎಂದು ಇಲಾಖೆಯ ಎನ್‌ಸಿಡಿ ವಿಭಾಗದಿಂದ ತಿಳಿಸಿದ್ದಾರೆ.
'ಡಾ. ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ' ಯೋಜನೆಯಿಂದ ಲಕ್ಷಾಂತರ ಜನರಿಗೆ ಅನುಕೂಲವಾಗುತ್ತಿದೆ. ಆರಂಭದಲ್ಲಿ ಟೆನೆಸ್ಟೆಪ್ಲೆಸ್ ಇಂಜೆಕ್ಷನ್ ಲಭ್ಯವಿರಲಿಲ್ಲ. ಇಸಿಜಿ ಮಾಡಿ ಹೆಚ್ಚಿನ ಚಿಕಿತ್ಸೆಗೆ ಸಂಬಂಧಪಟ್ಟ ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿತ್ತು. ಇಂಜೆಕ್ಷನ್ ಬಂದ ಬಳಿಕ ರೋಗಿಗಳಿಗೆ ಸಾಕಷ್ಟು ಅನುಕೂಲವಾಗಿದ್ದು, ಸದ್ಯ 86 ಆಸ್ಪತ್ರೆಗಳಲ್ಲೂ ಇಂಜೆಕ್ಷನ್ ಲಭ್ಯವಿದೆ.
